Advertisement

Rajya Sabha: ಇಂದು ಜೈಪುರದಲ್ಲಿ ಸೋನಿಯಾ ನಾಮಪತ್ರ ಸಲ್ಲಿಕೆ ಸಾಧ್ಯತೆ

12:23 AM Feb 14, 2024 | Pranav MS |

ನವದೆಹಲಿ: ರಾಜ್ಯಸಭಾ ಚುನಾವಣೆಗಾಗಿ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಸ್ಥಾನದಿಂದ ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ. ಆ ಬಗ್ಗೆ ಕಾಂಗ್ರೆಸ್‌ನ ಮೂಲಗಳು ನವದೆಹಲಿಯಲ್ಲಿ ತಿಳಿಸಿವೆ. ಅದಕ್ಕಾಗಿ ಸೋನಿಯಾ ಗಾಂಧಿಯವರು ಜೈಪುರಕ್ಕೆ ಪ್ರಯಾಣಿಸಲಿ­ದ್ದಾರೆ.

Advertisement

ಅವರೊಂದಿಗೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇರಲಿದ್ದಾರೆ. ಸದ್ಯ ಅವರು ರಾಯ್‌ಬರೇಲಿ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಅಲ್ಲಿಂದ ಪುತ್ರಿ ಪ್ರಿಯಾಂಕಾ ವಾದ್ರಾ ಅವರು ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next