Advertisement

Rajya Sabha; ಸಂಸದೆ ಜಯಾ, ಸಭಾಧ್ಯಕ್ಷ ಧನಕರ್‌ ಕದನ ತಾರಕಕ್ಕೆ!

12:17 AM Aug 10, 2024 | Team Udayavani |

ಹೊಸದಿಲ್ಲಿ: ಕಳೆದ ಕೆಲವು ದಿನಗಳಿಂದ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್‌ ಹೆಸರಿನ ಕುರಿತಾಗಿ ಸಭಾಧ್ಯಕ್ಷ ಜಗದೀಪ್‌ ಧನಕರ್‌ರೊಂದಿಗೆ ತಣ್ಣದಾಗಿ ನಡೆಯುತ್ತಿದ್ದ ವಾಗ್ವಾದವು ಶುಕ್ರವಾರ ರಾಜ್ಯಸಭೆಯಲ್ಲಿ ತಾರಕಕ್ಕೇರಿತು.

Advertisement

ಸದನದಲ್ಲಿ ಮಾತಾಡಿದ ಜಯಾ, “ಸರ್‌, ನಾನೊಬ್ಬ ಕಲಾವಿದೆ. ಹಾಗಾಗಿ ವ್ಯಕ್ತಿಯ ಅಭಿವ್ಯಕ್ತಿ ಮತ್ತು ಆಂಗಿಕ ಭಾಷೆಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ನನ್ನನ್ನು ಕ್ಷಮಿಸಿ, ನಿಮ್ಮ ಮಾತಿನ ಧಾಟಿ ಸರಿ ಇಲ್ಲ, ನೀವು ಕುರ್ಚಿಯ ಮೇಲೆ ಕುಳಿತಿರಬಹುದು, ನಾವೆಲ್ಲರೂ ಸಹೋದ್ಯೋಗಿಗಳು. ಆದರೆ, ನಿಮ್ಮಿಂದ ನಮಗೆಲ್ಲ ಶಾಲೆಗೆ ಹೋಗುವ ಮಕ್ಕಳ ರೀತಿ ಭಾಸವಾಗುತ್ತಿದೆ’ ಎಂದು ಹೇಳಿದರು.  ಆಗ ತಾಳ್ಮೆ ಕಳೆದುಕೊಂಡ ಧನಕರ್‌, ಜಯಾಗೆ ಕುಳಿತುಕೊಳ್ಳಲು ತಿಳಿಸಿ “ನಿಮ್ಮಿಂದ ನಾನು ಪಾಠ ಕಲಿಯಬೇಕಾಗಿಲ್ಲ. ನನ್ನ ಮಾತಿನ ಧಾಟಿಯ ಕುರಿತು ಪ್ರಶ್ನೆಯೆತ್ತಿ ದ್ದೀರಿ. ನೀವು ಖ್ಯಾತ ನಾಮರೇ ಇರಬಹುದು. ಆದರೆ ಸಭಾ ಮರ್ಯಾದೆ ಯನ್ನು ಗೌರವಿಸಬೇಕು’ ಎಂದು ಚಾಟಿ ಬೀಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಯಾ, ಕೂಡಲೇ ಧನಕರ್‌ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು.

ವಾಗ್ವಾದದ ಅನಂತರ ಜಯಾಗೆ ಬೆಂಬಲ ಸೂಚಿಸಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿಪಕ್ಷ ಸದಸ್ಯರು ಸಭಾತ್ಯಾಗ ನಡೆಸಿದರು.  ಸದನದ ಹೊರಗೂ ಸಭಾಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿದರು.

ಸಭಾಧ್ಯಕ್ಷ ಧನಕರ್‌ ಪದಚ್ಯುತಿಗೆ ವಿಪಕ್ಷಗಳಿಂದ ನೋಟಿಸ್‌ಗೆ ಸಿದ್ಧತೆ?

ಉಪರಾಷ್ಟ್ರಪತಿಯೂ ಆಗಿರುವ ರಾಜ್ಯ ಸಭೆ ಸಭಾಧ್ಯಕ್ಷ ಜಗದೀಪ್‌ ಧನಕರ್‌  ಹಾಗೂ ವಿಪಕ್ಷ ಗಳ ನಡುವಿನ ಸಾಮರಸ್ಯ ಹದಗೆಟ್ಟಿದ್ದು, ಉಪರಾಷ್ಟ್ರಪತಿಯನ್ನು ಪದಚ್ಯುತಗೊಳಿಸು ವಂತೆ ನೋಟಿಸ್‌ ನೀಡಲು “ಐಎನ್‌ಡಿಐಎ ಕೂಟ’ ಮುಂದಾಗಿದೆ.

Advertisement

ಯಾವಾಗ ನೋಟಿಸ್‌ ಕೊಡಬೇಕೆಂಬ ಕುರಿತು ಚರ್ಚಿಸಿ, ನಿರ್ಧರಿಸಬೇಕಿದೆ. ವಿಪಕ್ಷಗಳ  ನೋಟಿಸ್‌ಗೆ ಗೆಲುವು ಸಿಗುುವುದಿಲ್ಲವಾ ದರೂ, ಧನ್‌ಕರ್‌ ಅವರ ನಿರಂತರ ಪಕ್ಷಪಾತ ಧೋರಣೆ   ಯನ್ನು ಬಯಲಿಗೆಳೆದಂತಾಗುತ್ತದೆ ಎಂಬುದು ವಿಪಕ್ಷಗಳ ಲೆಕ್ಕಾಚಾರವಾಗಿದೆ. ಧನಕರ್‌ ವಿರುದ್ಧದ ನೋಟಿಸ್‌ಗೆ ವಿಪಕ್ಷಗಳ 87 ಸದಸ್ಯರು ಅಂಕಿತ  ಹಾಕ ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.  ಧನಕರ್‌ ಪದಚ್ಯುತಿಗೆ ಸಂಬಂಧಿಸಿದಂತೆ ನಿರ್ಣಯ ಮಂಡಿಸುವ ಬಗ್ಗೆ ರಾಜ್ಯಸಭಾ ನಾಯಕ ಜೆ.ಪಿ.ನಡ್ಡಾ ಅವರಿಗೂ  ಮಾಹಿತಿ ನೀಡಿವೆ ಎನ್ನಲಾಗಿದೆ.  ಆಡಳಿತ ಪಕ್ಷದ ಸದಸ್ಯರ ಪರವಾಗಿ ಪಕ್ಷಪಾತಿಯಾಗಿ ವರ್ತಿಸುವ ಜಗದೀಪ್‌ ಧನಕರ್‌ ಅವರು, ಮೇಲಿಂದ ಮೇಲೆ ವಿಪಕ್ಷ ನಾಯಕ ಹಾಗೂ ಉಪನಾಯಕರ ಮೈಕ್‌ಗಳನ್ನು ಆಫ್ ಮಾಡುತ್ತಾರೆಂಬ ಆರೋಪವಿದೆ. ಜತೆಗೆ ವಿಪಕ್ಷಗಳ ಸದಸ್ಯರು ಮಾತನಾಡಲು ಅವಕಾಶ ನೀಡುವುದಿಲ್ಲ ದೂರು ಕೂಡ ಇದೆ.

Advertisement

Udayavani is now on Telegram. Click here to join our channel and stay updated with the latest news.

Next