Advertisement
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮರಸ್ವಾಮಿ “ತಟಸ್ಥ’ರಾದಂತೆ ಕಂಡು ಬರುತ್ತಿದ್ದು, ಅಭ್ಯರ್ಥಿ ಕುಪೇಂದ್ರ ರೆಡ್ಡಿ “ಏಕಾಂಗಿ’ಯಾದಂತೆ ಕಾಣುತ್ತಿದೆ.
Related Articles
Advertisement
ಆದರೆ, ಆತ್ಮಸಾಕ್ಷಿ ಮತಗಳು ತಮಗೆ ಬೀಳುವ ಬಗ್ಗೆ ಸ್ವತಃ ಅಭ್ಯರ್ಥಿಯೇ ಆತ್ಮವಿಶ್ವಾಸ ಹೊಂದಿದಂತಿಲ್ಲ. ಈ ಹಂತದಲ್ಲಿ ಪ್ರಯತ್ನವಷ್ಟೇ ಮಾಡಬಹುದು. ಆದರೆ ಫಲ ಸಿಗುತ್ತೆ ಎಂದು ಹೇಳಲಿಕ್ಕಾಗುವುದಿಲ್ಲ. ಏನೇ ತಂತ್ರಗಳಿದ್ದರೂ ಮೊದಲೇ ಮಾಡಿಕೊಳ್ಳಬೇಕಾಗುತ್ತದೆ ಎಂದು ಸ್ವತಃ ಅಭ್ಯರ್ಥಿಯೇ ಹೇಳುತ್ತಾರೆ.
ಭರವಸೆ ಹೇಗೆ ಇಟ್ಟುಕೊಳ್ಳುವುದು, ಎಲ್ಲರೂ ಪ್ರತಿಷ್ಠೆಗೆ ಬಿದ್ದಿದ್ದಾರೆ. ಬಿಜೆಪಿ-ಕಾಂಗ್ರೆಸ್ ಇಬ್ಬರೂ ಜೆಡಿಎಸ್‌ಗೆ ಓಟ್ ಹಾಕಲ್ಲ. ಜೆಡಿಎಸ್ ಆ ಎರಡೂ ಪಕ್ಷಗಳಿಗೆ ಓಟ್ ಹಾಕಲ್ಲ. ಇದರಿಂದ ಯಾರಿಗೆ ಲಾಭ ಆಗಲಿದೆ ಎಂದು ಬಿಡಿಸಿ ಹೇಳಬೇಕಾಗಿಲ್ಲ. ಎರಡನೇ ಪ್ರಾಶಸ್ತ್ಯದ ಮತ, ಆತ್ಮ ಸಾಕ್ಷಿ ಮತ, ಅಡ್ಡ ಮತದಾನ ಇವು ಲೆಕ್ಕಾಚಾರಗಳಷ್ಟೇ ಎಂದು ಕೆಲ ಜೆಡಿಎಸ್ ಮುಖಂಡರು ಹೇಳುತ್ತಾರೆ.
“ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಕಾಂಗ್ರೆಸ್-ಬಿಜೆಪಿಯಲ್ಲಿ ಅನೇಕರು ನಮಗೆ ಸಮಾನ ಮನಸ್ಕರು ಇದ್ದಾರೆ. ದೇವೇಗೌಡರು, ಕುಮಾರಸ್ವಾಮಿಯವರು ಏನು ಮಾಡಬೇಕು, ಏನು ಹೇಳಬೇಕು ಎಲ್ಲಾ ಮಾಡಿದ್ದಾರೆ. ಈಗ ಎಚ್.ಡಿ. ರೇವಣ್ಣ, ಸಿ.ಎಸ್. ಪುಟ್ಟರಾಜು ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ’.– ಟಿ.ಎ ಶರವಣ, ವಿಧಾನಪರಿಷತ್ ಸದಸ್ಯ.