Advertisement

ಕಾಂಗ್ರೆಸ್ ನಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆಯೇ ಇಲ್ಲದಂತಾಗಿದೆ: ರಾಜುನಾಯಕ

07:07 PM Apr 02, 2023 | Team Udayavani |

ಕುರುಗೋಡು: ಈಗಾಗಲೇ ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳ ಪಕ್ಷದ ಬಿರುಗಾಳಿ ಬೀಸಿದ್ದು, ಚುನಾವಣೆಯಲ್ಲಿ ಜೆಡಿಎಸ್ ಬಾವುಟ ಹಾರುವುದು ಖಚಿತ ಎಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ರಾಜುನಾಯಕ ಹೇಳಿದರು.

Advertisement

ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ನೂತನ ಕಛೇರಿ ಉದ್ಘಾಟಿಸಿ ನಂತರ ಸಮಾರಂಭದಲ್ಲಿ ಮಾತನಾಡಿ, ಕಳೆದ ಹದಿನೈದು ವರ್ಷ ಕಾಂಗ್ರೆಸ್ ನಲ್ಲಿದ್ದು ಗುಡ್ಡಕ್ಕೆ ಕಲ್ಲು ಹೋರಲಾಗಿದೆ. ಕಾಂಗ್ರೆಸ್ ನಲ್ಲಿ ನಿಷ್ಠಾವಂತ ಹಾಗೂ ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆ ಇಲ್ಲ. ಕಳೆದ ಆರು ವರ್ಷದಿಂದ ಕ್ಷೇತ್ರದ ಜನರ ಸಂಪರ್ಕದಲ್ಲಿರುವೆ. ಈಗ ಕಾಂಗ್ರೆಸ್ ಬಿಟ್ಟು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಗೆ ಸೇರ್ಪಡೆಗೊಂಡಿರುವೆ. ಕಂಪ್ಲಿ ಕ್ಷೇತ್ರದಲ್ಲಿ ಇನ್ನೂ ಇಪ್ಪತ್ತು ಸಾವಿರ ಜನರು ಜೆಡಿಎಸ್ ಗೆ ಸೇರ್ಪಡೆಯಾಗಲಿದ್ದಾರೆ. ಬಳ್ಳಾರಿ ಮತ್ತು ಕೊಪ್ಪಳ, ವಿಜಯನಗರ ಜಿಲ್ಲೆ ಉಸ್ತುವಾರಿ ತೆಗೆದುಕೊಂಡು ಪಕ್ಷವನ್ನು ಬಲಿಷ್ಠ ಗೊಳಿಸಲು ಸೂಚಿಸಿದ್ದಾರೆ. ಏ.10ರಂದು ಹೆಚ್.ಡಿ.ಕುಮಾರಸ್ವಾಮಿ ಅವರು ಕುರುಗೋಡು ಪಟ್ಟಣಕ್ಕೆ ಬರಲಿದ್ದಾರೆ. ಕಂಪ್ಲಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು. ಮತ್ತು ಐದು ಸಾವಿರ ಕೊಟಿ ಅನುದಾನವನ್ನು ಕಂಪ್ಲಿ ಕ್ಷೇತ್ರಕ್ಕೆ ತಂದು, ಅಭಿವೃದ್ಧಿಗೊಳಿಸಲಾಗುವುದು. ಕಂಪ್ಲಿ ಕ್ಷೇತ್ರದ ಜನರು ನಮಗೆ ಮತ ಹಾಕುವ ಮೂಲಕ ಕುಮಾರಸ್ವಾಮಿ ಅವರ ಕೈಬಲಪಡಿಸಬೇಕು.

ಕುಮಾರಸ್ವಾಮಿ ಅವರು 20 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಕುಮಾರಸ್ವಾಮಿ ಅವರ ಸಾಲ ಮನ್ನಾದ ರುಣವನ್ನು ತೀರಿಸುತ್ತೇವೆ ಎಂದು ರೈತರು ಅನ್ನುತ್ತಿದ್ದಾರೆ. ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬಿರುಗಾಳಿ ಹಬ್ಬಿದೆ. ಕಾಂಗ್ರೆಸ್ ಈಗಾಗಲೇ ಜೋತು ಬಿದ್ದಿದೆ ಎಂದರು.

ಜಿಲ್ಲಾ ಗೌರವಾಧ್ಯಕ್ಷ ಹೇಮಯ್ಯಸ್ವಾಮಿ ಮಾತನಾಡಿ, 1983 ರಲ್ಲಿ ಜನತಾದಳ ಪಕ್ಷದ ಹೆಜ್ಜೆ ಗುರುತು ಇದೆ. ಆಡಳಿತ ಸಾಧನೆ ಹಾಗೂ ಯೋಜನೆಗಳನ್ನು ಜನತೆಗೆ ಕೊಂಡಿರುತೆಗವ ವಿಷಯ ತಿಳಿದಿದೆ. ರಾಜ್ಯದಲ್ಲಿ ವಾತಾವರಣ ಪೂರಕವಾಗಿರುವುದರಿಂದ ಜೆಡಿಎಸ್ ಗೆ ಮತ್ತಷ್ಟು ಶಕ್ತಿ ಬಂದಿದೆ. ಆಪರೇಷನ್ ಕಮಲದ ಮೂಲಕ ಆಡಳಿತ ನಡೆಸಿ, ಸಾರ್ವಜನಿಕರಿಗೆ ಉಪಯೋಗ ಇಲ್ಲದಂತೆ ಮಾಡಿದೆ. ರಾಜ್ಯವು ಹೀನಾಯ ಸ್ಥಿತಿಗೆ ಹೋಗಿದೆ. ರಾಜುನಾಯಕ ಅವರಿಗೆ ಜನರ ಸೇವೆ ಮಾಡುವ ಕಳಕಳಿ ಇದೆ. ಮತ್ತು ಆಸೆ, ಆಕಾಂಕ್ಷೆಗಳಿವೆ. ಜೆಡಿಎಸ್ ಗೆ ಸೇರ್ಪಡೆಗೊಂಡಿರುವುದು ಮತ್ತಷ್ಟು ಬಲ ಬಂದಿದೆ. ಕಂಪ್ಲಿ ಕ್ಷೇತ್ರಕ್ಕೆ ರಾಜುನಾಯಕ ಎಂಬ ಒಳ್ಳೆಯ ವ್ಯಕ್ತಿ ದೊರಕಿದ್ದು, ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಗೆ ಗೆಲುವು ಸಿಗುವುದು ಶತಸಿದ್ಧ ಎಂದರು.

ನಂತರ ಜೆಡಿಎಸ್ ಪಕ್ಷದ ಕಂಪ್ಲಿ ವಿಧಾನಸಭಾ ಕ್ಷೇತ್ರದ ನೂತನ ಪ್ರಧಾನ ಕಾರ್ಯದರ್ಶಿಯನ್ನಾಗಿ ಕಂಪ್ಲಿಯ ಜಗದೀಶ ಪೂಜಾರ್ ಅವರನ್ನು ನೇಮಕ ಮಾಡಿ ಆದೇಶ ಪತ್ರ ವಿತರಿಸಿದರು.

Advertisement

ಈ ಸಂದರ್ಭದಲ್ಲಿ ಕಂಪ್ಲಿ ಕ್ಷೇತ್ರದ ಅಧ್ಯಕ್ಷ ಮದಿರೆ ಹೇಮರೆಡ್ಡಿ, ಕಾರ್ಯಾಧ್ಯಕ್ಷ ವಿಶ್ವನಾಥಸ್ವಾಮಿ, ಕಾರ್ಯದರ್ಶಿ ದಮ್ಮೂರು ನಾರಾಯಣರೆಡ್ಡಿ, ಮುಖಂಡರಾದ ಶ್ರೀನಿವಾಸ, ಹಸನ್ ಸಾಬ್, ಕೃಷ್ಣ ನಾಯಕ, ಇರ್ಫಾನ್, ಚನ್ನಯ್ಯಸ್ವಾಮಿ ಸೋಮಸಮುದ್ರ, ಶೇಕ್ ನಬೀ, ಶೇಕ್ಷಾವಲಿ, ಪ್ರಸಾದ್, ನಂದ, ವಿರೇಶ, ಮಲ್ಲಿಕಾರ್ಜುನ, ರಾಮಾಂಜಿನಿ, ರಾಜಶೇಖರ, ಕೋಳೂರು ನಾಗಸ್ವಾಮಿ ಸೇರಿದಂತೆ ಅನೇಕರಿದ್ದರು.

ಇದನ್ನೂ ಓದಿ: ಮುಂದಿನ 25 ವರ್ಷಗಳಲ್ಲಿ ಭಾರತ ಸೂಪರ್ ಪವರ್ : ವಿದೇಶಾಂಗ ಸಚಿವ ಜೈ ಶಂಕರ್

Advertisement

Udayavani is now on Telegram. Click here to join our channel and stay updated with the latest news.

Next