Advertisement
ಅಗ್ನಿ ಗ್ರಾಮದ ಬಳಿ ಎಡದಂಡೆ ಮುಖ್ಯ ಕಾಲುವೆ 80 ಮೀಟರ್ ನಷ್ಟು ಕುಸಿತಗೊಂಡಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ಸೋಮವಾರ ನೀರು ಸ್ಥಗಿತಗೊಳಿಸಿದ ನಂತರ ಕಾಲುವೆಯ ಎಸ್‌ಆರ್ ಬಳಿ ಮಂಗಳವಾರ ಮುಂಜಾನೆಯಿಂದ ಕಾಲುವೆ ಕುಸಿತ ವಾಗಿರುವುದು ಕಂಡು ಬಂದಿದೆ. ಕುಸಿತಗೊಂಡ ಸ್ಥಳಕ್ಕೆ ನಿಗಮದ ಮುಖ್ಯ ಎಂಜಿನೀಯರ ಅಶೋಕ ವಾಸನದ ಹಾಗೂ ಎಸ್.ಇ ಶಂಕರ್ ರಾಠೋಡ, ಕರ‍್ಯನಿರ್ವಾಹಕ ಎಂಜಿನೀಯರ ಶಂಕರ್ ನಾಯ್ಕೋಡಿ, ಎಇಇ ವಿ.ಎಲ್.ಕಂಬಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
Related Articles
Advertisement
ಮುಖ್ಯಕಾಲುವೆ ಪದೇ ಪದೇ ಕುಸಿಯುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಸದ್ಯ ಭತ್ತ ತೆನೆ ಹಿರಿಯುವ ಹಂತಕ್ಕೆ ಬಂದಿವೆ. ರೈತರ ಹಿತದೃಷ್ಟಿಯಿಂದ ಆದಷ್ಟು ಬೇಗ ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ ಕಾಲುವೆ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ನರಸಿಂಹನಾಯಕ(ರಾಜುಗೌಡ) ತಿಳಿಸಿದ್ದಾರೆ.
ಒತ್ತಾಯ: ಅಗ್ನಿ ಗ್ರಾಮದ ಬಳಿ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ಪದೆ ಪದೆ ಕುಸಿತ ಇದ್ದರೂ ಕೂಡಾ ಮೇ ಮತ್ತು ಜೂನ್ ತಿಂಗಳಲ್ಲಿ ಶಾಶ್ವತ ದುರಸ್ತಿ ಕೈಗೊಳ್ಳಲು ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಸಿಎಂ ಅವರು ಹಾಗೂ ಜಲ ಸಂಪನ್ಮೂಲ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೌರಾಷ್ಟ ಸೋಮನಾಥ ನೀರು ಬಳಕೆದಾರರ ಸಂಘಗಳ ಮಹಾ ಮಂಡಳದ ಅಧ್ಯಕ್ಷ ರಂಗಪ್ಪ ಡಂಗಿ ಒತ್ತಾಯಿಸಿದ್ದಾರೆ.