Advertisement

ಚೀನಾ ರಕ್ಷಣಾ ಸಚಿವರೊಂದಿಗೆ ರಾಜನಾಥ್‌ ಸಿಂಗ್‌ ಮಹತ್ವದ ಸಭೆ

07:50 PM Apr 27, 2023 | Team Udayavani |

ನವದೆಹಲಿ: 2020ರಲ್ಲಿ ಭಾರತ ಮತ್ತು ಚೀನಿ ಸೈನಿಕರ ನಡುವೆ ನಡೆದಿದ್ದ ಸಂಘರ್ಷದ ಬಳಿಕ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಚೀನಾ ರಕ್ಷಣಾ ಸಚಿವ ಲಿ ಸಂಗ್‌ ಫು ಅವರೊಂದಿಗೆ ಮಹತ್ವದ ಸಭೆ ನಡೆಸಿದರು. ಶಾಂಘೈ ಸಹಕಾರ ಸಂಸ್ಥೆಯ ರಕ್ಷಣಾ ಸಚಿವರ ಭೇಟಿ ಸಂದರ್ಭದಲ್ಲಿ ಅವರೀರ್ವರೂ ಮಾತುಕತೆ ನಡೆಸಿದರು.

Advertisement

ಅದಲ್ಲದೇ, ಕಝಕಿಸ್ಥಾನ, ಇರಾನ್‌ಮತ್ತು ತಜಕಿಸ್ಥಾನದ ರಕ್ಷಣಾ ಸಚಿವರ ಜೊತೆಗೂ ರಾಜನಾಥ್‌ ಸಿಂಗ್‌ ಮಹತ್ವದ ಮಾತುಕತೆ ನಡೆಸಿದ್ದಾರೆ. ಎ.27 ಮತ್ತು 28ರಂದು ನಡೆಯಲಿರುವ ಬೇರೆ ಬೇರೆ ರಾಷ್ಟ್ರಗಳ ರಕ್ಷಣಾ ಸಚಿವರು, ಅಧಿಕಾರಿಗಳ ಭೇಟಿಯ ಸಂದರ್ಭದಲ್ಲಿ ಅವರು ದ್ವಿಪಕ್ಷೀಯ ರಕ್ಷಣಾ ವ್ಯವಸ್ಥೆಗಳ ಮತ್ತು ಇನ್ನಿತರ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ: PM Modi ವಿರುದ್ಧ ಖರ್ಗೆ ‘ವಿಷದ ಹಾವು’ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು

Advertisement

Udayavani is now on Telegram. Click here to join our channel and stay updated with the latest news.

Next