ಉಡುಪಿ: ಕೇಂದ್ರ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಮಾಹೆ ವಿಶ್ವವಿದ್ಯಾನಿಲಯದ 30ನೇ ಘಟಿಕೋತ್ಸವಕ್ಕೆ ಆಗಮಿಸಲಿದ್ದು, ಆ ಪ್ರಯುಕ್ತ ನಗರದಲ್ಲಿ ಗುರುವಾರವೇ ಪೊಲೀಸರು ಪ್ರಾಯೋಗಿಕವಾಗಿ ಝೀರೋ ಟ್ರಾಫಿಕ್ ಮಾಡಿದರು.
ಆದಿ ಉಡುಪಿಯ ಹೆಲಿಪ್ಯಾಡ್‌ನಿಂದ ಮಣಿಪಾಲದ ವರೆಗೆ ಪ್ರಾಯೋಗಿಕವಾಗಿ ಝೀರೋ ಟ್ರಾಫಿಕ್ ಮಾಡಲಾಯಿತು. ಈ ಕಾರಣಕ್ಕೆ ನಗರದಾದ್ಯಂತ
ಟ್ರಾಫಿಕ್ ದಟ್ಟನೆ ಉಂಟಾಯಿತು. ಈಗಾಗಲೇ ಸ್ಟೇಟ್ ಇಂಟೆಲಿಜೆನ್ಸ್, ಎನ್‌ಎಸ್‌ಜಿ, ಯುಪಿ ಪೊಲೀಸರು ಉಡುಪಿಯಲ್ಲಿ ಬೀಡುಬಿಟ್ಟಿದ್ದಾರೆ. 100ರಿಂದ 150 ಮಂದಿ ಜಿಲ್ಲೆಯ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4ರವರೆಗೆ ನಗರದಾದ್ಯಂತ ಬಿಗು ಪೊಲೀಸ್ ಭದ್ರತೆ ಇರಲಿದೆ.
ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆ್ಯಂಡ್ ಪ್ಲಾನಿಂಗ್ :
ಮಣಿಪಾಲ: ಮಾಹೆ ವಿ.ವಿ.ಯ ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆ್ಯಂಡ್ ಪ್ಲಾನಿಂಗ್‌ನ ಹೊಸ ಕಟ್ಟಡವನ್ನು ಕೇಂದ್ರ ರಕ್ಷಣ ಸಚಿವ ರಾಜನಾಥ ಸಿಂಗ್ ಅವರು ನ. 18ರಂದು ಲೋಕಾರ್ಪಣೆ ಮಾಡಲಿದ್ದಾರೆ. 3.9 ಎಕ್ರೆ ಪ್ರದೇಶದಲ್ಲಿ 1,45,000 ಚದರಡಿಯ ಕಟ್ಟಡ ನಿರ್ಮಿಸಲಾಗಿದೆ. ಆರ್ಕಿಟೆಕ್ಚರ್, ಡಿಸೈನಿಂಗ್, ಪ್ಲಾನಿಂಗ್ ಆ್ಯಂಡ್ ಫ್ಯಾಶನ್ ವಿಭಾಗದ
ಸುಮಾರು 1,200 ವಿದ್ಯಾರ್ಥಿಗಳು, ಬೋಧಕರಿಗೆ ಪೂರಕ ವಾಗಿ ಹೊಸ ತಂತ್ರಜ್ಞಾನದ ಜತೆಗೆ ಇಂಧನ ದಕ್ಷತೆ ಒಳಗೊಂಡಿ ರುವ ಕ್ಯಾಂಪಸ್ ಇದಾಗಿದೆ. ಆರ್ಕಿಟೆಕ್ಚರ್ ಆ್ಯಂಡ್ ಡಿಸೈನ್ ಶಿಕ್ಷಣಕ್ಕೆ ಪೂರಕ ರೀತಿಯಲ್ಲಿ ಕ್ಯಾಂಪಸ್ ಇದೆ ಎಂದು ಮಾಹೆ ಪ್ರಕಟನೆ ತಿಳಿಸಿದೆ.