Advertisement

ಬರ್ಜಾತ್ಯ ನಿಧನ

12:30 AM Feb 22, 2019 | |

ಮುಂಬೈ: ಹಲವು ಜನಪ್ರಿಯ ಸಿನಿಮಾ ನಿರ್ಮಾಣ ಮಾಡಿದ ರಾಜ್‌ಕುಮಾರ ಬರ್ಜಾತ್ಯ (77) ಹೃದಯಾಘಾತದಿಂದ ಮುಂಬೈನಲ್ಲಿ ನಿಧನರಾಗಿದ್ದಾರೆ. ಹಮ್‌ ಆಪ್ಕೆ ಹೈ ಕೌನ್‌, ಮೈನೆ ಪ್ಯಾರ್‌ ಕಿಯಾ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅವರು ಪತ್ನಿ ಸುಧಾ ಮತ್ತು ಪುತ್ರ ಸೂರಜ್‌ ಬರ್ಜಾತ್ಯರನ್ನು ಅಗಲಿದ್ದಾರೆ. ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆ ರಾಜಶ್ರೀ ಪ್ರೊಡಕ್ಷನ್ಸ್‌ ಮಾಲೀಕರೂ ಇವರಾಗಿದ್ದರು. ಇತ್ತೀಚೆಗೆ ಇವರು ನಿರ್ಮಿಸಿದ ಪ್ರೇಮ ರತನ್‌ ಧನ್‌ ಪಾಯೋ ಬಿಡುಗಡೆಯಾಗಿದೆ. ಹಮ್‌ ಚಾರ್‌ ಸಿನಿಮಾ ಬಿಡುಗಡೆಗೆ ಕಾದಿದೆ. ಸಿನಿಮಾ ರಂಗದ ಗಣ್ಯರು ಬರ್ಜಾತ್ಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಮುಂಬೈನ ವೊರ್ಲಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next