Advertisement
ಅಪ್ಪು ತುಂಬಾ ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದ ಕಥೆ ಇದು. ಅವರು ಕಥೆ ಕೇಳಿ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಕೊನೆಯ ಸಿನಿಮಾ ಕೂಡಾ ಓ2.
Related Articles
Advertisement
ಕಂಟೆಂಟ್ ಸಿನಿಮಾಗಳಿಗೆ ನಮ್ಮ ಬ್ಯಾನರ್ನಲ್ಲಿ ಮೊದಲ ಆದ್ಯತೆ. ಸದ್ಯದಲ್ಲೇ ಇನ್ನೊಂದೆರಡು ಸಿನಿಮಾ ಅನೌನ್ಸ್ ಮಾಡುತ್ತೇವೆ. ಸಂಸ್ಥೆಯನ್ನು ನಡೆಸಿಕೊಂಡು ಹೋಗುತ್ತೇವೆ.
*
ವೈಯಕ್ತಿಕವಾಗಿ ನನಗೆ ಸಸ್ಪೆನ್ಸ್-ಥ್ರಿಲ್ಲರ್ ಜಾನರ್ ಇಷ್ಟ. ಹಾಗಾಗಿ, ಅಂತಹ ಕಥೆಗಳು ನನಗೆ ಬೇಗ ಇಷ್ಟವಾಗುತ್ತಿದ್ದವು. ಮುಂದೆ ಬೇರೆ ಬೇರೆ ಜಾನರ್ಮ ಸಿನಿಮಾವನ್ನು ಪ್ರಯತ್ನಿಸುತ್ತೇನೆ.
*
ಯುವನಿಗೆ ಪಿಆರ್ ಕೆ ಬ್ಯಾನರ್ನಲ್ಲಿ ಮುಂದೊಂದು ದಿನ ಖಂಡಿತಾ ಸಿನಿಮಾ ನಿರ್ಮಿಸುತ್ತೇನೆ. ಎಲ್ಲವೂ ಕೂಡಿಬರಬೇಕು. “ಯುವ’ ಚಿತ್ರವನ್ನು ಜನ ತುಂಬಾ ಖುಷಿಯಿಂದ ಸ್ವೀಕರಿಸಿದ್ದಾರೆ.
*
“ಜಾಕಿ’ ಸಿನಿಮಾವನ್ನು ರೀ ರಿಲೀಸ್ ಮಾಡಿದಾಗ ಜನ ತೋರಿಸಿದ ಪ್ರೀತಿ ನೋಡಿ ಖುಷಿಯಾಯಿತು. 14 ವರ್ಷಗಳ ಹಿಂದೆ ಫಸ್ಟ್ ಡೇ ಸಿನಿಮಾ ನೋಡುವಾಗ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿತ್ತೋ, ಈ ಬಾರಿಯೂ ಹಾಗೇ ಇತ್ತು.
*
ಮುಂದಿನ ವರ್ಷ ಅಭಿಮಾನಿಗಳು ಯಾವ ಸಿನಿಮಾ ಕೇಳುತ್ತಾರೋ, ಅದನ್ನು ಬಿಡುಗಡೆ ಮಾಡುತ್ತೇವೆ. ಬಹುಶಃ “ಅಪ್ಪು’ ಸಿನಿಮಾ ಬಿಡುಗಡೆಯಾಗಬಹುದು