Advertisement

ಶಿವರಾಜ್‌ ಜೊತೆ ಸಿನಿಮಾ ಮಾಡಲಿದ್ದಾರೆ ಆರ್.ಚಂದ್ರು: ʼಮೈಲಾರಿ-2’ಗೆ ಫ್ಯಾನ್ಸ್‌ ಬೇಡಿಕೆ

10:57 AM Apr 01, 2024 | Team Udayavani |

ಬೆಂಗಳೂರು: ಸ್ಯಾಂಡಲ್‌ ವುಡ್‌ ಖ್ಯಾತ ನಿರ್ದೇಶಕ ಆರ್.ಚಂದ್ರು ಈ ವರ್ಷದ ಆರಂಭದಲ್ಲಿ ಆರ್.‌ ಸಿ ಸಂಸ್ಥೆಯಿಂದ ಸಿನಿಮಾಗಳನ್ನು ಅನೌನ್ಸ್‌ ಮಾಡಿದ್ದರು. ಇದೀಗ ಅವರ ಸಂಸ್ಥೆಯಿಂದ ನಿರ್ಮಾಣವಾಗಲಿರುವ ಹೊಸ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ.

Advertisement

ʼಫಾದರ್ʼ, ʼಪಿಓಕೆʼ, ʼಶ್ರೀರಾಮಬಾಣ ಚರಿತೆʼ, ʼಡಾಗ್ʼ, ʼಕಬ್ಜ 2ʼ ಸಿನಿಮಾಗಳನ್ನು ಆರ್.ಚಂದ್ರು ಘೋಷಣೆ ಮಾಡಿದ್ದರು. ಇದೀಗ ತಮ್ಮ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ 6ನೇ ಸಿನಿಮಾವನ್ನು ಆರ್.ಚಂದ್ರು ಅವರು ಅನೌನ್ಸ್‌ ಮಾಡಿದ್ದಾರೆ.

ʼಮೈಲಾರಿʼ ಸಿನಿಮಾದ ಮುಹೂರ್ತ ನೆರವೇರಿ ಇಂದಿಗೆ 14 ವರ್ಷಗಳಾಗಿವೆ. ಇದೇ ಸಂತಸದ ಸಮಯದಲ್ಲಿ ಆರ್.ಚಂದ್ರು ಅವರು ಮತ್ತೊಮ್ಮೆ ಶಿವಣ್ಣನೊಂದಿಗೆ ಜೈಜೋಡಿಸಿದ್ದಾರೆ. ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರೊಂದಿಗೆ ಆರ್.ಚಂದ್ರು ಅವರು ಸಿನಿಮಾ ಮಾಡಲಿದ್ದಾರೆ.

ಈ ಬಗ್ಗೆ ಪೋಸ್ಟರ್‌ ಹಂಚಿಕೊಂಡಿರುವ ಅವರು, “ಕನ್ನಡದ ಸೂಪರ್ ಹಿಟ್ ಚಿತ್ರ ʼಮೈಲಾರಿʼ ಮುಹೂರ್ತಕ್ಕೆ 14 ವರ್ಷಗಳು ತುಂಬಿದ ಈ ಶುಭ ಸಂದರ್ಭದಲ್ಲಿ, ಕರುನಾಡ ಚಕ್ರವರ್ತಿ ಡಾ||ಶಿವರಾಜ್ ಕುಮಾರ್ ರವರಿಗೆ ಹೊಸ ಚಿತ್ರ ಆರಂಭಿಸುತ್ತಿರುವುದು ಮತ್ತಷ್ಟು ಖುಷಿ ತಂದಿದೆ. ತಮ್ಮೆಲ್ಲರ ಆಶೀರ್ವಾದ ಇರಲಿ ಧನ್ಯವಾದಗಳು” ಬರೆದುಕೊಂಡಿದ್ದಾರೆ.

ಶೀಘ್ರದಲ್ಲಿ ಶೂಟಿಂಗ್‌ ಆರಂಭಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ತಮ್ಮ ಬ್ಯಾನರ್‌ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಆದರೆ ನಿರ್ದೇಶನ ಯಾರು ಮಾಡಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ.

Advertisement

ಸಿನಿಮಾ ಅನೌನ್ಸ್‌ ಆದ ಬಳಿಕ ʼಮೈಲಾರಿ-2ʼ ಬರಬೇಕೆಂದು ಕೆಲವು ಅಭಿಮಾನಿಗಳು ಕಮೆಂಟ್‌ ಮಾಡಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next