Advertisement

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

04:02 PM Apr 30, 2024 | Team Udayavani |

ಪುನೀತ್‌ ರಾಜ್‌ಕುಮಾರ್‌ ಅವರ “ಜಾಕಿ’ ಚಿತ್ರ ಮಾರ್ಚ್‌ನಲ್ಲಿ ಮರುಬಿಡುಗಡೆಯಾಗಿ ಮತ್ತೂಮ್ಮೆ ಹಿಟ್‌ಲಿಸ್ಟ್‌ಗೆ ಸೇರಿತ್ತು. ಈಗ ಅವರ ಮತ್ತೂಂದು ಚಿತ್ರ ಬಿಡುಗಡೆಯಾಗುತ್ತಿದೆ. ಅದು “ಅಂಜನಿಪುತ್ರ’.

Advertisement

ಈ ಚಿತ್ರ ಮೇ 10ರಂದು ರೀ ರಿಲೀಸ್‌ ಆಗುತ್ತಿದೆ. ಎಂ.ಎನ್‌.ಕೆ ಮೂವೀಸ್‌ ಲಾಂಛನದಲ್ಲಿ ಎಂ.ಎನ್‌ ಕುಮಾರ್‌ ನಿರ್ಮಿಸಿ, ಎ.ಹರ್ಷ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗಿತ್ತು. ಈಗ ರಾಜ್ಯಾದ್ಯಂತ ಅಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಅದ್ದೂರಿಯಾಗಿ ಮರು ಬಿಡುಗಡೆ  ಮಾಡುತ್ತಿರುವುದಾಗಿ ನಿರ್ಮಾಪಕ ಎಂ ಎನ್‌ ಕುಮಾರ್‌ ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಪುನೀತ್‌ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ರವಿ ಬಸ್ರೂರು ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದ ಬಾರಿ ಖುಷಿ ಮಾರೆ ನಂಗೆ ಸೇರಿದಂತೆ ಎಲ್ಲಾ ಹಾಡುಗಳು ಜನಪ್ರಿಯವಾಗಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಪುನೀತ್‌ ಸಿನಿಮಾಗಳು ರೀ ರಿಲೀಸ್‌ ಆಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next