Advertisement

ರಾಜಸ್ಥಾನದಲ್ಲಿ 4 ಸಾವಿರ ರಾಸುಗಳು ಸಾವು

09:44 PM Aug 04, 2022 | Team Udayavani |

ಜೈಪುರ: ಗುಜರಾತ್‌ನಲ್ಲಿ ರಾಸುಗಳಿಗೆ ಕಾಡಿದ್ದ ಚರ್ಮ ಗಂಟು ರೋಗ ಈಗ ರಾಜಸ್ಥಾನದ 16 ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದೆ.

Advertisement

ರೋಗದಿಂದಾಗಿ ರಾಜ್ಯದಲ್ಲಿ 4 ಸಾವಿರ ದನಗಳು ಅಸುನೀಗಿವೆ. ಮರುಭೂಮಿ ರಾಜ್ಯದಲ್ಲಿ 94 ಸಾವಿರ ಕೇಸುಗಳು ಈಗಾಗಲೇ ದೃಢಪಟ್ಟಿವೆ. ಈ ಪೈಕಿ 70 ಸಾವಿರ ಗೋವುಗಳಿಗೆ ಚಿಕಿತ್ಸೆ ನೀಡಲಾಗಿದೆ. ಇದೊಂದು ಸಾಂಕ್ರಾಮಿಕ ರೋಗವಾಗಿರುವ ಹಿನ್ನೆಲೆಯಲ್ಲಿ ಅಂತಾರಾಜ್ಯ ಜಾನುವಾರು ಸಾಗಣೆ ಮೇಲೆ ನಿಷೇಧ ಹೇರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಕೆಲವೊಂದು ತಳಿಯ ಕೀಟಗಳು, ಸೊಳ್ಳೆಗಳು, ತಿಗಣೆಗಳಿಂದ ಈ ರೋಗ ಹರಡುತ್ತದೆ. ಶ್ರೀಗಂಗಾನಗರ, ಬಾರ್ಮೆರ್‌, ಜೋಧ್‌ಪುರ್‌, ಜಾಲೋರ್‌ ಮತ್ತು ಬಿಕಾನೆರ್‌ ಜಿಲ್ಲೆಗಳಲ್ಲಿ ಈ ಪ್ರಕರಣ ಹೆಚ್ಚಾಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next