Advertisement

ಏಕಕಾಲದಲ್ಲಿ ಒಂದೇ ವಿ.ವಿ.ಯಿಂದ ಮೂವರು ಸೋದರಿಯರ ಪಿಎಚ್‌.ಡಿ. ಸಾಧನೆ

01:48 AM Dec 28, 2020 | sudhir |

ಜೈಪುರ: ರಾಜಸ್ಥಾನದ ಝುಂಝುನು ಜಿಲ್ಲೆಯ ಮೂವರು ಸೋದರಿಯರು ಏಕಕಾಲದಲ್ಲಿ ಒಂದೇ ವಿ.ವಿ.ಯಿಂದ ಪಿಎಚ್‌.ಡಿ. ಪಡೆಯುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.

Advertisement

ಇವರು ರಾತ್ರಿ ಕೃಷಿ ಕಾರ್ಯ ನಡೆಸಿ ಹಗಲು ಚಪ್ಪಲಿ ಅಂಗಡಿಯಲ್ಲಿ ದುಡಿಯುವ ರೈತನ ಮಕ್ಕಳು ಎಂಬುದು ವಿಶೇಷ. ಮೂವರು ಅಕ್ಕತಂಗಿಯರು ಏಕಕಾಲದಲ್ಲಿ ಪಿಎಚ್‌.ಡಿ. ಪಡೆದ ಎರಡನೇ ಸಾಧನೆ ಇದು. ಈ ಹಿಂದೆ ಮಧ್ಯಪ್ರದೇಶದಲ್ಲಿ ಮೂವರು ಈ ಮೈಲಿಗಲ್ಲನ್ನು ಪ್ರಥಮ ಬಾರಿಗೆ ನೆಟ್ಟಿದ್ದರು.

ಸರಿತಾ ಭೂಗೋಳ ಶಾಸ್ತ್ರದಲ್ಲಿ, ಕಿರಣಾ ಕೆಮೆಸ್ಟ್ರಿಯಲ್ಲಿ, ಅನಿತಾ ಶಿಕ್ಷಣ ಶಾಸ್ತ್ರದಲ್ಲಿ ಮಹಾಪ್ರಬಂಧ ಬರೆದಿದ್ದಾರೆ. ಜಗದೀಶ್‌ ಪ್ರಸಾದ್‌ ಝಬರ್ಮಲ್‌ ವಿ.ವಿ.ಯು ಪಿಎಚ್‌.ಡಿ. ಪ್ರದಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next