Advertisement
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾದ್ಯಂತ 6 ಸಂಚಾರ ವಾಹನಗಳು ಜು.31ರವರೆಗೂ ಸಂಚರಿಸಿ ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿಮೆ, ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಕುರಿತು ಮಾಹಿತಿ ನೀಡಲಿವೆ. ಜೊತೆಗೆ ಕರಪತ್ರ, ಭಿತ್ತಿಪತ್ರಗಳನ್ನು ವಿತರಿಸಿ, ಜಾಗೃತಿ ಮೂಡಿಸಲಿವೆ. ಇದರ ಸದ್ಬಳಕೆ ಮಾಡಿಕೊಂಡು, ಪ್ರತಿಯೊಬ್ಬರು ಸಹ ಬೆಳೆವಿಮೆ ಮಾಡಿಸಬೇಕು ಎಂದು ರೈತರಲ್ಲಿ ಮನವಿ ಮಾಡಿದರು.
Related Articles
Advertisement
ಕಡ್ಡಾಯವಾಗಿ ಬೆಳೆವಿಮೆ ಮಾಡಿಸಿ: ಜಿಲ್ಲೆಯಲ್ಲಿ ಬೆಳೆ ವಿಮೆ ಮಾಡಿಸಿ, ಅತಿವೃಷ್ಟಿಯಿಂದ ನಾಶವಾದ ಕೃಷಿ ಬೆಳೆ ಗಳ ರೈತರಿಗೆ ಕಳೆದ ಎರಡು ಸಾಲಿನಿಂದ ಈವರೆಗೆ 37 ಕೋಟಿ ರೂ. ಬೆಳೆವಿಮೆ ಪರಿಹಾರ ನೀಡಲಾಗಿದೆ. ಮುಂ ದಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ಯಾವುದೇ ರೈತರು ಬೆಳೆ ನಷ್ಟದ ಸಂಕಷ್ಟಕ್ಕೆ ಸಿಲುಕದಿರಲು ಕಡ್ಡಾ ಯ ವಾಗಿ ಬೆಳೆವಿಮೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ದ್ರಾಕ್ಷಿ ಬೆಳೆಗೆ ಜೂ.30 ಕೊನೆ: 2022-23ನೇ ಸಾಲಿನ ಮುಂಗಾರು, ಹಿಂಗಾರು ಹಂಗಾಮುಗಳ ಅವಧಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಜಿಲ್ಲೆಯಲ್ಲಿ ಮಾವು ಮತ್ತು ದ್ರಾಕ್ಷಿ ಬೆಳೆ ವಿಮೆಯಡಿ ಸೂಚಿಸಲಾಗಿದ್ದು, ಒಂದು ಹೆಕ್ಟೇರ್ ದ್ರಾಕ್ಷಿ ಬೆಳೆಗೆ 14 ಸಾವಿರ ರೂ. ವಿಮಾ ಮೊತ್ತ ಹಾಗೂ ಮಾವು ಬೆಳೆಗೆ 4 ಸಾವಿರ ರೂ. ವಿಮಾ ಮೊತ್ತವನ್ನು ಪಾವತಿಸತಕ್ಕದ್ದು.
ಜು.31 ಕೊನೆ ದಿನ: ವಿಮೆ ನೋಂದಣಿಗೆ ದ್ರಾಕ್ಷಿ ಬೆಳೆಗೆ ಜೂ.30, ಮಾವು ಸೇರಿ ಇತರೆ ತೋಟಗಾರಿಕೆ, ಕೃಷಿ ಬೆಳೆಗಳಿಗೆ ಜು.31 ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ತಾಲೂಕು ಮಟ್ಟದ ಕಚೇರಿ, ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿಯ ದೂ.18004250505, ಮೊ.9380976447ಗೆ ಸಂಪರ್ಕಿಸಬಹುದು ಎಂದು ವಿವರಿಸಿದರು.
ಜಂಟಿ ಕೃಷಿ ನಿರ್ದೇಶಕಿ ರೂಪಾ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಎಂ.ಗಾಯತ್ರಿ, ಕೃಷಿ ಉಪನಿರ್ದೇಶಕ ಚಂದ್ರಕುಮಾರ್, ವಿವಿಧ ಇಲಾಖೆ ಅಧಿ ಕಾರಿಗಳು, ಸಿಬ್ಬಂದಿ ಹಾಜರಿದ್ದರು. ಈ ವೇಳೆ ಬೆಳೆ ವಿಮೆ ಮಾಹಿತಿಯುಳ್ಳ ಕರಪತ್ರ, ಭಿತ್ತಿಪತ್ರಗಳನ್ನು ಡೀಸಿ ಬಿಡುಗಡೆ ಮಾಡಿದರು.
ಹವಾಮಾನ ವೈಪರಿತ್ಯದಿಂದ ಬೆಳೆ ನಷ್ಟವಾದಲ್ಲಿ ವಿಮಾ ಕಂಪನಿಯಿಂದ ಪರಿಹಾರ ಹಣವನ್ನು ತ್ವರಿತವಾಗಿ ದೊರಕಿಸಿಕೊಡಲು ಜಿಲ್ಲಾಡಳಿತ ಸಂಪೂರ್ಣ ಜವಾಬ್ದಾರಿ ಕೈಗೆತ್ತಿಕೊಂಡಿದ್ದು, ಯಾವುದೇ ಆಂತಕವಿಲ್ಲದೆ ಧೈರ್ಯದಿಂದ ವಿಮೆ ಮಾಡಿಸಿಕೊಳ್ಳಬಹುದು.● ಆರ್.ಲತಾ,
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ.