Advertisement
ಕಿನ್ನಿಗೋಳಿ: ಮೂಲ್ಕಿ ತಾಲೂಕಿನ ಕಿಲೆಂಜೂರು ಗ್ರಾಮವು ಕೃಷಿ ಪ್ರಧಾನ ಪ್ರದೇಶ. ಇಲ್ಲಿ ಭತ್ತ, ಅಡಕೆ, ತೆಂಗು ಬೆಳೆಯಲಾಗುತ್ತಿದೆ. ಪ್ರದೇಶದ ಹೆಚ್ಚಿನ ಭಾಗವು ನದಿ ನಂದಿನಿ ತಟದಲ್ಲಿದ್ದು, ಮಳೆಗಾಲದಲ್ಲಿ ಇಲ್ಲಿನ ಜನರಿಗೆ ನೆರೆಯ ಭೀತಿ ಸಾಮಾನ್ಯ. ಅತ್ತೂರು ಮಹಾಗಣಪತಿ ಮಂದಿರಕ್ಕೆ ಹೋಗುವ ಕಚ್ಚಾರಸ್ತೆ ಅಭಿವೃದ್ಧಿ ಆಗಬೇಕಿದೆ. ಮಳೆಗಾಲದಲ್ಲಿ ಚಿಕ್ಕ ನೆರೆ ಬಂದರೂ ರಸ್ತೆ ಮುಳುಗಡೆಯಾಗುತ್ತದೆ.ಮಂಗಳೂರು ನಗರದಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಮೂಲ್ಕಿ -ಮೂಡುಬಿದಿರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಈ ಗ್ರಾಮ ಸೇರುತ್ತದೆ.
ಸದ್ಯ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಬರುವ ಕಿಲೆಂಜೂರು ಗ್ರಾಮವು ಹೆಚ್ಚಿನ ಭಾಗ ಕೃಷಿ ಭೂಮಿ ಹೊಂದಿದ್ದು, ನದಿ ತಟವಾಗಿರುವುರಿಂದ ತಗ್ಗು ಪ್ರದೇಶವಾಗಿದೆ. ಮಳೆಗಾಲದಲ್ಲಿ ಜಾಸ್ತಿ ಮಳೆ ಬಂದರೆ ಗ್ರಾಮದ ಕೆಲ ಭಾಗಗಳು ಜಲಾವೃತವಾಗುತ್ತವೆ. ಇದನ್ನು ನಿರ್ವಹಣೆ ಮಾಡಲು ತಡೆಗೋಡೆ ನಿರ್ಮಿಸಬೇಕಿದೆ. ಇಲ್ಲಿನ ಶೇ. 80 ರಷ್ಟು ಮನೆಗಳಲ್ಲಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಇದನ್ನೂ ಓದಿ:ಸದಾಶಿವ ಆಯೋಗದ ವರದಿಯಲ್ಲಿ ಯಾವುದೇ ಸಮುದಾಯವನ್ನು ಮೀಸಲಾತಿಯಡಿ ಕೈಬಿಡುವ ಅಂಶವೇ ಇಲ್ಲ
Related Articles
– ಇಲ್ಲಿನ ಸುಮಾರು ಒಂದು ಕಿ.ಮೀ. ಉದ್ದದ ನದಿ ದಂಡೆಗೆ ನೆರೆ ಹಾವಳಿಯಿಂದ ತಪ್ಪಿಸಲು ಶಾಶ್ವತ ತಡೆಗೋಡೆ ಅಗಬೇಕಿದೆ.
– ಕಿಲೆಂಜೂರಿನಿಂದ ಸೂರಿಂಜೆ ಹೋಗುವ ರಸ್ತೆ ಅಭಿವೃದ್ಧಿ ಆಗಬೇಕಿದೆ. ಮಳೆಗಾಲದಲ್ಲಿ ನೆರೆ ಬಂದರೆ ರಸ್ತೆ ಮುಳುಗಡೆಯಾಗಿ ಸಂಚಾರ ಕಷ್ಟಸಾಧ್ಯ.
– ನಂದಿನಿ ನದಿಗೆ ಕಿಲೆಂಜೂರಿನಲ್ಲಿ ಪುಚ್ಚಾಡಿ ಕಿಂಡಿ ಅಣೆಕಟ್ಟಿಗೆ ಸೇತುವೆ ಇದ್ದು ಚಿಕ್ಕ ವಾಹನ ಮಾತ್ರ ಸಂಚರಿಸಲು ಸಾಧ್ಯ. ಆದರೇ ಇಲ್ಲಿನ ದೊಡ್ಡ ಸೇತುವೆ ಕನಸು ನನಸು. ಆಗ ಸುರತ್ಕಲ್ ಸಂಪರ್ಕಿಸಲು ಹತ್ತಿರದ ದಾರಿಯಾಗಬಲ್ಲದು.
– ಗ್ರಾಮದಲ್ಲಿ ಮನೆ ನಿವೇಶನ ರಹಿತರ ಜಾಗ ಗುರುತು ಮಾಡಿ ಕೊಡಬೇಕಿದೆ.
– ಗ್ರಾಮೀಣ ಪ್ರದೇಶವಾಗಿರುವುದರಿಂದ ರಸ್ತೆಗಳಿಗೆ ದಾರಿ ದೀಪದ ಇದ್ದರೂ ಹೈಮಾಸ್ಟ್ ದೀಪದ ವ್ಯವಸ್ಥೆ ಆಗಬೇಕಿದೆ.
– ಕಿಲೆಂಜೂರು ಪುಚ್ಚಾಡಿ, ಕರ್ನಿಕೆರೆಯ ಅಣೆಕಟ್ಟಿನ ಭಾಗದಲ್ಲಿ ನದಿಯಲ್ಲಿ ಹೂಳು ಎತ್ತದೆ ಇರುವುದರಿಂದ ಮರಳು ತುಂಬಿ ನೆರೆ ಹಾವಳಿ ಜಾಸ್ತಿಯಾಗಿದೆ.ನದಿಯಲ್ಲಿ ಹೆಚ್ಚು ಮರಳು ಹೂಳು ಇರುವುದರಿಂದ ಅಣೆಕಟ್ಟಿನಲ್ಲಿ ನೀರು ಶೇಖರಣೆ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ.
– ಗ್ರಾಮದಲ್ಲಿ ನಂದಿನಿ ನದಿಗೆ ಸೇರುವ ಚಿಕ್ಕ ಹಳ್ಳ ತೋಡುಗಳಿವೆ. ಅದರ ಮೋರಿಗಳು ತ್ಯಾಜ್ಯ ಹೂಳುತುಂಬಿ ನೀರು ಸರಾಗವಾಗಿ ಹರಿಯಲು ತೊಡಕಾಗಿದೆ. ಇದರಿಂದಾಗಿ ತುಂಬಿರುವ ಹೂಳು ಎತ್ತುವ ಕೆಲಸ ಆಗಬೇಕಿದೆ.
– ಶ್ಮಶಾನ ಅಭಿವೃದ್ಧಿಗೆ ಜಾಗ, ವ್ಯವಸ್ಥೆ ಆಗಬೇಕಾಗಿದೆ.
– ಕಿಲೆಂಜೂರಿನಲ್ಲಿ ಮಳೆಗಾಲದಲ್ಲಿ ನೆರೆ ಬಂದು ನದಿ ತಟದಲ್ಲಿ ಇರುವ ಸುಮಾರು 12 ಮನೆಗಳಿಗೆ ಮುಳುಗಡೆಯ ಭೀತಿ ಇದೆ. ಇವರಿಗೆ ಸೂಕ್ತ ಮನೆ ನಿವೇಶನ ಆಗಬೇಕಾಗಿದೆ. ಕಿಲೆಂಜೂರು ಪೊಯ್ಯದಗುಡ್ಡೆಗೆ ರಸ್ತೆ ನಿರ್ಮಾಣ ಅಗತ್ಯ.
Advertisement
– ರಘುನಾಥ ಕಾಮತ್ ಕೆಂಚನಕೆರೆ