Advertisement
ಭೂಮಿಯ ಮೇಲೆ ಬಿದ್ದ ಅಪಾರ ಮಳೆಯನೀರು ಹಿಂಗುವುದಕ್ಕಿಂತ ಹರಿದು ಹೋಗುವುದು ಹೆಚ್ಚು, ಇದನ್ನು ಮನಗಂಡ ಕೆಲವರು ಮಳೆನೀರಿನ ಕೊಯ್ಲು ವಿಧಾನದಿಂದ ನೀರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇಂತಹ ಆಧುನಿಕ ಯುಗದಲ್ಲಿ ಮಳೆಯ ನೀರಿನ ಬಳಕೆಯಿಂದ ನಿತ್ಯಜೀವನ ನಡೆಸುತ್ತಿರುವವರನ್ನು ಕಾಣುವುದೇ ಅಪರೂಪವಾಗಿದೆ.
Related Articles
Advertisement
ಹೊನ್ನೆ, ಬೀಟೆ, ಬಿದಿರು, ಸಿಲ್ವರ್, ಎಬೋನಿ, ಮಹಾಗನಿ ಸೇರಿದಂತೆ ಹತ್ತು ಹಲವು ಮರಗಳನ್ನು ಬೆಳೆಯುವುದಲ್ಲದೆ ಒಂದು ಕಾಲು ಎಕರೆ ಜಾಗವನ್ನು ಮಲೆನಾಡಿನ ಅರಣ್ಯದಂತೆ ಮಾಡಿದ್ದಾರೆ. ಮನೆಗೆ ಬೇಕಾದ ಎಲ್ಲಾ ಅಗತ್ಯ ತರಕಾರಿಗಳನ್ನು ಸಂಪೂರ್ಣ ಸಾವಯವ ಹಾಗೂ ಮಳೆನೀರು ಕೊಯ್ಲು ತೊಟ್ಟಿನಿಂದ ನೀರನ್ನು ಹಾಯಿಸಿ ಗ್ರಾಮೀಣ ಪ್ರದೇಶದ ರೈತರಿಗೆ ವೈಜ್ಞಾನಿಕ ಕೃಷಿ ತಜ್ಞರಾಗಿದ್ದಾರೆ.
20 ಸಾವಿರ ಲೀಟರ್ ಸಂಗ್ರಹ: ನೆಲಮಂಗಲ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯಾಗುವ ಪ್ರಮಾಣವನ್ನು ಮನಗಂಡು ಅದರ ಉಪಯೋಗ ಪಡೆಯಲು ಮುಂದಾದೆ, ಮರಸರಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ 800 ರಿಂದ 900 ಮಿ.ಮೀ ಮಳೆಯಾಗುವುದರಿಂದ 240 ಅಡಿ ವಿಸ್ತೀರ್ಣದಲ್ಲಿ 20 ಸಾವಿರ ಲೀಟರ್ ನೀರು ಸಂಗ್ರಹವಾಗುತ್ತದೆ. ಈ ನೀರು 6 ರಿಂದ 7 ತಿಂಗಳು ಬಳಸುತ್ತೇವೆ. ಈ ಭಾಗದಲ್ಲಿ ನವೆಂಬರ್, ಡಿಸೆಂಬರ್ ಸಮಯದಲ್ಲಿ ಮಳೆಯಾಗುವುದರಿಂದ ವರ್ಷ ಪೂರ್ಣ ಮಳೆಯ ನೀರಿನ ಬಳಕೆಮಾಡಲು ಸಹಕಾರಿಯಾಗಿದೆ ಎಂದು ಎನ್.ಆರ್.ಶೆಟ್ಟಿ ಉದಯವಾಣಿಗೆ ತಿಳಿಸಿದರು.
ಸಣ್ಣ ಹಿಡುವಳಿದಾರಿಗೆ ಅನುಕೂಲ: ನನ್ನ ಬಳಿ ಕಡಿಮೆ ಜಮೀನಿದೆ ನಾನು ವ್ಯವಸಾಯ ಮಾಡಲು ಸಾಧ್ಯವಿಲ್ಲ ಕೊಳವೆ ಬಾವಿ ತೆಗೆಸಲು ಹಣವಿಲ್ಲ ಎನ್ನುವ ರೈತರಿಗೆ ಎನ್.ಆರ್.ಶೆಟ್ಟಿಯವರು ಮಾದರಿ, ಒಂದು ಕಾಲು ಎಕರೆಯಲ್ಲಿ ಮಾಡಿರುವ ಸಾವಯವ ಕೃಷಿ ತೋಟ ಹಾಗೂ ಮಳೆನೀರು ಕೊಯ್ಲು ವಿಧಾನ ಸಣ್ಣ ಹಿಡುವಳಿದಾರ ರೈತರಿಗೆ ಬಹಳಷ್ಟು ಅನುಕೂಲಕರವಾಗಿದೆ.
14 ವರ್ಷ ಜೀವನ: ತಾಲೂಕಿನ ಮರಸರಹಳ್ಳಿ ಗ್ರಾಮಕ್ಕೆ ಬಂದ ಎನ್.ಆರ್.ಶೆಟ್ಟಿ ಹಾಗೂ ಪತ್ನಿ ಸರಸ್ವತಿ 14 ವರ್ಷಗಳಿಂದ ಗ್ರಾಪಂನಿಂದ ಬರುವ ಕುಡಿಯುವ ನೀರು ಅಥವಾ ಕೊಳವೆ ಬಾವಿಯ ನೀರನ್ನು ಬಳಸದೇ 15 ಅಡಿ ಅಗಲ, 30 ಅಡಿ ಉದ್ದವಿರುವ ಹಂಚಿನ ಮನೆಯಲ್ಲಿ ಮಳೆನೀರು ಕೊಯ್ಲು ಪದ್ಧತಿಯಿಂದ ಸಂಪಿನಲ್ಲಿ ನೀರನ್ನು ಸಂಗ್ರಹಿಸಿ ಆ ನೀರನ್ನು ಶುದ್ಧೀಕರಿಸಿ ಕುಡಿಯಲು, ಅಡುಗೆಗೆ ಹಾಗೂ ದಿನನಿತ್ಯ ಚಟುವಟಿಕೆಗಳಲ್ಲಿ ಮಳೆಯ ನೀರನ್ನೇ ಬಳಸುತ್ತಿದ್ದಾರೆ.
ಪ್ರಧಾನಿ ಮೋದಿ ಅಭಿನಂದನೆ: ಎನ್.ಆರ್.ಶೆಟ್ಟಿ ಬೆಂಗಳೂರಿನಲ್ಲಿ ಸಹಜ ಸಮೃದ್ಧ ಟ್ರಸ್ಟ್ ರಚಿಸಿಕೊಂಡು ಕಳೆದ ಹದಿನೈದು ವರ್ಷಗಳಿಂದ ಸಾವಯುವ ಕೂಟ ರಚಿಸಿದ್ದಾರೆ. ಈ ಕೂಟಕ್ಕೆ 2018ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾರೆ.
ಮಡಿಕೆಯ ನೀರು: 14 ವರ್ಷಗಳ ಹಿಂದೆಯೇ ಅಗೋಫಾರೆಸ್ಟ್ ಮಾಡಿ ಬೇಸಿಗೆಯಲ್ಲಿ ಮರಗಳಿಗೆ ನೀರು ಒದಗಿಸಲು ಮರದ ಬುಡಕ್ಕೆ ಮಡಿಕೆಯನ್ನು ಹೂದಿಗಿಸಿ ನೀರನ್ನು ಹಾಯಿಸಿ ಅಂದಿನ ಕಾಲದಲ್ಲೇ ಇಂದಿನ ಇಸೇಲ್ ಮಾದರಿ ಕೃಷಿಯನ್ನು ಅಳವಡಿಸಿಕೊಂಡ ಸಸಿಗಳನ್ನು ಮರಗಳಾಗಿ ಮಾಡಿರುವ ಎನ್.ಆರ್.ಶೆಟ್ಟಿಯವರ ಪರಿಶ್ರಮ ನಿಜಕ್ಕೂ ಮಾದರಿ.
* ಕೊಟ್ರೇಶ್.ಆರ್