Advertisement
ಉತ್ತಮವಾಗಿ ಮಳೆಯಾದರೂ ಕರೆ ತುಂಬಿ ಹರಿಯದೇ ಇರುವುದು ನೋವಿನ ಸಂಗತಿ. ಅವೈಜ್ಞಾನಿಕವಾಗಿ ಕೆರೆಯಲ್ಲಿ ಒಳಚರಂಡಿಯ ಕೊಳವೆ ನಿರ್ಮಿಸಲಾಗಿದೆ. ಇವುಗಳು ದುರಸ್ತಿ ಹಂತಕ್ಕೆ ತಲುಪಿ ಅವುಗಳಿಂದ ಮಳೆ ನೀರು ಚರಂಡಿ ಮೂಲಕ ಹೊರ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೆರೆ ಉತ್ತಮವಾಗಿ ಅಭಿವೃದ್ಧಿಯಾಗಲು ತಮ್ಮ ಸಹಕಾರ ಇರುವುದಾಗಿ ತಿಳಿಸಿದರು. ವಹಿ°ಕುಲು ಕ್ಷತ್ರಿಯ ತಿಗಳ ಜನಾಂಗದ ಎಸ್. ರಂಗಸ್ವಾಮಿ, ನರಸಿಂಹಮೂರ್ತಿ, ಆಂಜನೇಯರೆಡ್ಡಿ, ಮಹೇಶ್, ರಾಮಣ್ಣ, ನರೇಂದ್ರ, ಮಹದೇವ್ ಹಾಗೂ ಸ್ಥಳೀಯರು ಇದ್ದರು.
Related Articles
Advertisement
1926ರಲ್ಲಿ ಸುಮಾರು 86 ಎಕರೆ ವಿಸ್ತೀರ್ಣದಲ್ಲಿ ಈ ಕೆರೆಯನ್ನು ನಿರ್ಮಿಸಲಾಗಿದೆ. 2020ರಲ್ಲಿ ಅಲ್ಪ ಪ್ರಮಾಣದಲ್ಲಿ ಕೋಡಿ ಹರಿದಿದ್ದು, ಇಂದು ಪೂರ್ಣ ಪ್ರಮಾಣದಲ್ಲಿ ತುಂಬಿ ಬೀಡಿಕೆರೆಗೆ ನೀರು ಹರಿಯುತ್ತಿದೆ. ಕೆರೆಗೆ ಸಾರ್ವಜನಿಕರ ಸಹಯೋಗದೊಂದಿಗೆ ಕೆಲ ವರ್ಷದ ಹಿಂದೆ ಆಗಿನ ಜಿÇÉಾಧಿಕಾರಿ ಕರೀಗೌಡ ನೇತೃತ್ವದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿತ್ತು. ತಾಲೂಕಿನ ಮೆಣಸಿ ಕೆರೆ, ಹುಸ್ಕೂರು ಕೆರೆಗಳು ಸಹ ತಂಬಿ ಕೋಡಿ ಹರಿಯುತ್ತಿವೆ. ಮೆಣಸಿ ಕೆರೆ 25 ವರ್ಷಗಳ ಹಿಂದೆ ತಂಬಿದ್ದು, ಈಗ ತುಂಬಿ ಹರಿಯುತ್ತಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.