Advertisement
ಶನಿವಾರ ಮಲ್ಪೆ, ಮಣಿಪಾಲ, ಉಡುಪಿ, ಹಿರಿಯಡಕ, ಕಾಪು, ಬ್ರಹ್ಮಾವರ ಭಾಗದಲ್ಲಿ ಬಿಸಿಲು ಮೋಡ ವಾತಾವರಣದ ನಡುವೆ ಕೆಲಕಾಲ ಉತ್ತಮ ಮಳೆಯಾಗಿದೆ.
ಮಂಗಳೂರು: ಬಂಗಾಲಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಿದ್ದು, ಕರಾವಳಿ ಭಾಗದಲ್ಲಿ ಮಳೆ ಬಿರುಸು ಪಡೆಯುವ ನಿರೀಕ್ಷೆ ಇದೆ. ಭಾರತೀಯ ಹವಾಮಾನ ಇಲಾಖೆಯು ಜೂ.23ರಂದು “ರೆಡ್ ಅಲರ್ಟ್’ ಘೊಷಿಸಿದೆ.
Related Articles
Advertisement
ಮಂಗಳೂರು ನಗರ ಸಹಿತ ದ. ಕ. ಜಿಲ್ಲೆಯಲ್ಲಿ ಶನಿವಾರ ಸಾಧಾರಣ ಮಳೆಯಾಗಿದೆ. ಬೆಳಗ್ಗೆ ಮತ್ತು ಸಂಜೆ ಮಳೆ ಆಗಾಗ್ಗೆ ಮಳೆ ಸುರಿದಿದೆ. ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿತ್ತು. ಕರಾವಳಿ ಭಾಗದಲ್ಲಿ ಜೂ.22 ರಂದು ಭಾರತೀಯ ಹವಾಮಾನ ಇಲಾಖೆಯು “ರೆಡ್ ಅಲರ್ಟ್’ ಘೋಷಿಸಿತ್ತು. ಆದರೂ ಜಿಲ್ಲೆಯಲ್ಲಿ ದಿನವಿಡೀ ಬಿರುಸಿನ ಮಳೆಯಾಗಿಲ್ಲ.
ಮಂಗಳೂರಿನಲ್ಲಿ 29. ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.4 ಡಿ.ಸೆ. ಮತ್ತು 22.2 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.2 ಡಿ.ಸೆ. ಕಡಿಮೆ ಇತ್ತು.