Advertisement
ತಾಲೂಕಿನಲ್ಲಿ ಸತತ ಒಂದು ವಾರದಿಂದ ಸುರಿಯುತ್ತಿರುವ ಸೋನೆ ಮಳೆಗೆ ಬೇಯಿಸಿದ ಅಡಕೆ ಕೊಳೆತು ಹೋಗುತ್ತಿದೆ. ರಾಗಿ ಪೈರು ನೆಲಕಚ್ಚಿದೆ. ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದೆ. ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರವಿಲ್ಲದಂತಾಗಿದೆ. ಕೂಲಿ ಕಾರ್ಮಿಕರು ಕೆಲಸ ಮಾಡಲಾಗುತ್ತಿಲ್ಲ. ಮನೆಗಳು ಕುಸಿಯುತ್ತಿವೆ. ಸರ್ಕಾರಿ ಕಟ್ಟಡಗಳ ಮೇಲೆ ನೀರು ನಿಲ್ಲುತ್ತಿದೆ, ರಸ್ತೆಗಳು ಕೆಸರು ಗದ್ದೆಗಳಾಗುತ್ತಿವೆ. ಮಕ್ಕಳು ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ.
Related Articles
Advertisement
ಬೀದಿ ಬದಿ ವ್ಯಾಪಾರಿಗಳಿಗೂ ಕಷ್ಟ: ಮಳೆ ಬರು ವುದು, ಹೋಗುವುದು ಯಾವುದು ತಿಳಿಯುತ್ತಿಲ್ಲ, ಸೂರ್ಯನ ದರ್ಶನವಾಗಿ ಒಂದು ವಾರ ಕಳೆಯು ತ್ತಿದೆ. ಹಣ್ಣು, ಹೂ, ಎಲೆ, ತರಕಾರಿ ಹಾಗೂ ತಳ್ಳುವ ಗಾಡಿಯ ಹೋಟೆಲ್, ಪಾನಿಪುರಿ, ಕಬಾಬ್ ವ್ಯಾಪಾರಿಗಳು ಸೋನೆ ಮಳೆಯ ಆಟಕ್ಕೆ ಸುಸ್ತಾಗಿ ಹೋಗಿದ್ದಾರೆ. ಮಳೆ ಇಲ್ಲವೆಂದು ವ್ಯಾಪಾರ ಆರಂಭಿಸಿದರೆ, ಮಳೆ ಬಂದು ಮಾಡಿದ ತಿನಿಸುಗಳು ವ್ಯಾಪಾರವಿಲ್ಲದೆ ಉಳಿಯುತ್ತಿದೆ. ದುಬಾರಿ ದಿನಸಿ ಸಾಮಗ್ರಿಗಳ ಆರ್ಭಟದಲ್ಲಿ ಒಪ್ಪತ್ತಿನ ಊಟಕ್ಕಾಗಿ ದುಡಿಯುವ ಕೈಗಳು ನಷ್ಟ ಅನುಭವಿಸುತ್ತಿವೆ.
ಮುಂದಿನ ದಿನದಲ್ಲೂ ಮಳೆ ನಿರೀಕ್ಷೆ : ಚಿಕ್ಕನಾಯಕನ ಹಳ್ಳಿ ತಾಲೂಕಿನಲ್ಲಿ ಜಿಲ್ಲಾ ಕೃಷಿ ಹವಾಮಾನ ಘಟಕದಿಂದ ಮಳೆಯ ಮುನ್ಸೂಚನೆ ವಿವರವನ್ನು ಪ್ರಕಟಗೊಳಿಸಿದೆ. ಸೋಮವಾರ 29 ಮಿ.ಮೀ, ಮಂಗಳವಾರ 36.1 ಮಿ.ಮೀ, ಬುಧವಾರ 32.0 ಮಿ.ಮೀ ಮಳೆಯಾಗುವ ಸಾಧ್ಯತೆಯ ಬಗ್ಗೆ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು ತಿಳಿಸಿದ್ದಾರೆ.
“ಮಳೆಯಾಗುತ್ತಿರುವುದು ಖುಷಿಯ ವಿಚಾರ. ಅಡಕೆ ಕಟಾವಿಗೆ ಬಂದಿದೆ. ಆದರೆ, ಮಳೆಯಿಂದ ಕಟಾವಿಗೆ ತೊಂದರೆಯಾಗಿದೆ. ರಾಗಿ ಪೈರು ಹಾಳಾಗುತ್ತಿದೆ. ಎಲ್ಲಾ ಕಡೆಯಿಂದ ರೈತರು ತೊಂದರೆಪಡು ವಂತಾಗಿದೆ. ಸರ್ಕಾರ ಇದನ್ನು ಗಂಭಿರವಾಗಿ ಪರಿಗಣಿಸಿ, ರೈತರಿಗೆ ಸೂಕ್ತ ಅನುಕೂಲ ಮಾಡಿಕೊಡಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ.” – ರವೀಂದ್ರ.ಟಿ, ಅಧ್ಯಕ್ಷ, ತಾಲೂಕು ಬಿಜೆಪಿ
ರೈತ ಮೋರ್ಚಾ, ಚಿಕ್ಕನಾಯಕನಹಳ್ಳಿ
- – ಚೇತನ್