Advertisement
ಹಲವೆಡೆ ಮಳೆಗೆ ರಸ್ತೆಗಳು ಜಲಾವೃತವಾಗಿ ಕೆರೆಯಂತೆ ನೀರು ನಿಂತಿದ್ದರೆ ಆ ರಸ್ತೆಯಲ್ಲಿ ಸಾಗುವ ವಾಹನ ಸವಾರರ ಪರದಾಟ ಹೇಳತೀರದು. ರಿಚ್‌ಮಂಡ್ ಟೌನ್ ಸೇರಿದಂತೆ ನಗರದ ಕೆಲವು ರಸ್ತೆ ಗಳಲ್ಲಿ ಬೃಹದಾಕಾರದ ಮರ ಧರೆ ಗುರುಳಿ ಜನಜೀವನ ಅಸ್ತವ್ಯಸ್ತಗೊಂಡಿದೆ, ಮತ್ತೂಂ ದೆಡೆ ಮನೆ ಮುಂದೆ ನಿಲುಗಡೆ ಮಾಡಿದ ಕಾರುಗಳು, ಬೈಕ್‌ಗಳು ನೀರಿನಲ್ಲಿ ಅರ್ಧ ಮುಳುಗಿರುವ ದೃಶ್ಯ ಅಲ್ಲಲ್ಲಿ ಕಂಡುಬಂದವು.
Related Articles
Advertisement
ಕಾರ್ಮೋಡಕ್ಕೆ ಬೆದರಿದ ನಾಗರಿಕರು: ಜಯ ನಗರ, ಜೆ.ಪಿ .ನಗರ, ಎಂ.ಜಿ. ರಸ್ತೆ, ವಿಜಯ ನಗರ, ರಾಜ ರಾಜೇ ಶ್ವರಿ ನಗರ, ರಾಜಾಜಿ ನಗರ ಹಾಗೂ ಕೆ.ಆರ್. ಮಾರು ಕಟ್ಟೆ ಸೇರಿ ದಂತೆ ಬಹುತೇಕ ಮಧ್ಯಾಹ್ನ ಕಪ್ಪು ಕಾರ್ಮೋಡ ಆವರಿಸಿತ್ತು. ಆಗಸದಲ್ಲಿ ಕಪ್ಪು ಮೋಡ ಆವರಿಸುತ್ತಿದ್ದಂತೆ ಜನ ಮಳೆಯ ಮುನ್ನೆಚ್ಚರಿಕೆ ವಗಹಿಸಿ ಕಚೇರಿಗಳಿಂದ ತಮ್ಮ ಮನೆಗಳತ್ತ ಮುಖ ಮಾಡಿರುವ ದೃಶ್ಯ ಕಂಡು ಬಂತು. ಹಲವೆಡೆ ವಿದ್ಯುತ್ ಕಡಿತ ಉಂಟಾದರೆ, ಮಳೆ ಆರಂ ಭಕ್ಕೂ ಮುನ್ನ ಬೆಂಗಳೂರಿನ ಕೆಲವೆಡೆ ಮುನ್ನೆ ಚ್ಚರಿಕಾ ಕ್ರಮವಾಗಿ ವಿದ್ಯುತ್ ಕಡಿತ ಗೊಳಿಸ ಲಾಯಿತು. ಮಳೆ ಸುರಿದ ವೇಳೆ ಇಂಟ ರ್ನೆಟ್ ಸಮಸ್ಯೆಯಿಂದಾಗಿ ಮನೆಯಿಂ ದಲೇ ಕೆಲಸ ನಿರ್ವಹಿಸುವವರು ಒದ್ದಾಡುತ್ತಿದ್ದಾರೆ.
ಜಯನಗರದಲ್ಲಿ 30 ನಿಮಿಷ ವರ್ಷಧಾರೆ: ಜನ ತತ್ತರ: ಜಯನಗರ ಹಾಗೂ ಜೆಪಿನಗರದಲ್ಲಿ ಸುಮಾರು 30 ನಿಮಿಷಗಳ ಕಾಲ ಗುಡುಗಿನಿಂದ ಕೂಡಿದ ಬಿರುಗಾಳಿ ಮಳೆ ಸುರಿದಿದೆ. ಈ ಮಳೆಗೆ ಅಲ್ಲಿನ ನಿವಾಸಿಗಳು ತತ್ತರಿಸಿ ಹೋದರೆ, ಪ್ರಮುಖ ರಸ್ತೆಗಳು, ಬಡಾವಣೆಗಳಲ್ಲಿ ಓಡಾಡಲು ಸಾಧ್ಯವಾಗದೇ ಜನ ಸಾಮಾನ್ಯರು ಪರ್ಯಾಯ ರಸ್ತೆ ಹುಡುಕುತ್ತಿರಯುವುದು ಕಂಡು ಬಂತು. ಧಾರಾಕಾರ ಮಳೆಗೆ ಜಯನಗದಲ್ಲಿ ಮ್ಯಾನ್ ಹೋಲ್ ತೆರೆದು ಚರಂಡಿ ನೀರು ಉಕ್ಕಿ ಹರಿದಿದೆ.
ಬಿಟಿಎಂ ಲೇಔಟ್‌ನಲ್ಲಿ ಗರಿಷ್ಠ 3.8 ಸೆಂ.ಮೀ. ಮಳೆ: ಬಿಟಿಎಂ ಲೇಔಟ್‌ನಲ್ಲಿ 3.8 ಸೆಂ.ಮೀ. ಮಳೆಯಾಗಿದ್ದು, ಇದು ಬುಧವಾರ ಬೆಂಗಳೂರಿನಲ್ಲಿ ಸುರಿದ ಅತ್ಯಧಿಕ ಮಳೆಯ ಪ್ರಮಾಣವಾಗಿದೆ. ಬಿಟಿಎಂ ಲೇಔಟ್ ಆಸು-ಪಾಸಿನಲ್ಲಿರುವ ಜಯನಗರ, ಜೆ.ಪಿ.ನಗರ ಭಾಗವೂ ಇದೇ ವ್ಯಾಪ್ತಿಗೆ ಸೇರುತ್ತವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಳೆ ಸುರಿದಿರುವುದು ಕಂಡು ಬಂದಿದೆ. ಉಳಿದಂತೆ ದೊರೆಸಾನಿಪಾಳ್ಯ 3.7 ಸೆಂ.ಮೀ., ಪುಲಕೇಶಿನಗರ 3.5, ಬೊಮ್ಮನಹಳ್ಳಿ 3.3, ಮಾರತ್ತಹಳ್ಳಿ 2.9, ಸಂಪಂಗಿರಾಮನಗರ 2.8, ಹಂಪಿನಗರ 2.7, ಕೋಡಿಗೆಹಳ್ಳಿ 2.7, ಅರಕೆರೆ 2.6, ಎಚ್‌ಎಸ್‌ಆರ್ ಲೇಔಟ್ 2.4, ಮಾರುತಿ ಮಂದಿರ 2.3, ಎಚ್‌ಎಎಲ್ 2, ಮನೋರಾಯನಪಾಳ್ಯ 1.9, ಹೆರೋಹಳ್ಳಿ 1.8, ವಿ.ನಾಗೇನಹಳ್ಳಿ 1.3, ವಿವಿಪುರ 1.3, ರಾಜರಾಜೇಶ್ವರಿ ನಗರದಲ್ಲಿ 1.2 ಸೆಂ.ಮೀ. ಮಳೆಯಾಗಿದೆ. ಈ ತಿಂಗಳು ಈವರೆಗೆ ವಾಡಿಕೆಗಿಂತ ಶೇ.92ರಷ್ಟು ಹೆಚ್ಚುವರಿ ಮಳೆ: ಹವಾಮಾನ ಇಲಾಖೆಯು ಗುರುವಾರವೂ ಬೆಂಗಳೂರಿನಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹಳದಿ ಅಲರ್ಟ್ ಘೋಷಿಸಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಅ.1ರಿಂದ 23ರ ವರೆಗೆ ನಗರದಲ್ಲಿ 21.8 ಸೆಂ.ಮೀ. ಮಳೆ ಸುರಿದಿದೆ. 11.3 ಸೆಂ.ಮೀ. ವಾಡಿಕೆ ಮಳೆಯಾಗಿದೆ. ಆದರೆ, ವಾಡಿಕೆಗಿಂತ ಶೇ.92ರಷ್ಟು ಹೆಚ್ಚುವರಿ ಮಳೆಯಾಗಿದೆ.