Advertisement
ಕರಾವಳಿ ಹಾಗೂ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಾ.20ರ ವರೆಗೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಿಂಚು ಸಹಿತ ಮಳೆಯಾಗಲಿದೆ. ಬೆಂಗಳೂರಿನಲ್ಲಿ ರಾತ್ರಿ ಮಳೆಯಾಗುವ ಸಾಧ್ಯತೆಗಳಿವೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು 3 ಡಿ.ಸೆ. ಹೆಚ್ಚಳವಾಗುವ ಸಾಧ್ಯತೆಗಳಿವೆ.
ಶನಿವಾರ ಉತ್ತರ ಒಳನಾಡಿನ ಒಂದೆರಡು ಕಡೆ ಮಳೆಯಾಗಿದೆ. ಕರಾವಳಿಯಲ್ಲಿ ಒಣಹವೆ ಮುಂದುವರಿದಿದೆ. ಬೀದರ್ ಹಾಗೂ ಬೀದರ್‌ನ ನಿರ್ಣಾದಲ್ಲಿ ಅತೀ ಹೆಚ್ಚು 7 ಸೆಂ.ಮೀ ಮಳೆಯಾಗಿದೆ. ಯಾದಗಿರಿಯ ಶಹಪುರದಲ್ಲಿ 6, ಬೀದರ್ ನಿಟ್ಟೂರಿನಲ್ಲಿ 5, ಬೀದರ್‌ನ ಮನ್ನಾಲಿ, ಮಂಠಾಳ, ಸಂತಪುರ, ಜನವಾಡ, ಹುಮನಾಬಾದ್, ಕಲಬುರಗಿಯ ಕಮಲಪುರದಲ್ಲಿ ತಲಾ 3 ಸೆಂ.ಮೀ, ಬೀದರ್‌ನ ಮುಡಬಿ, ಕೋಲಾರ, ಮಾಲೂರು, ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣ, ಎಂಪ್ರಿಯಲ್ಲಿ ತಲಾ 2, ಬೀದರ್‌ನ ರಾಜೇಶ್ವರ್, ಹಲಬುರ್ಗಾ, ಕಲಬುರಗಿಯ ಮುಧೋಳೆ, ಅಡಕಿ, ವಿಜಯಪುರದ ತಾಳಿಕೋಟೆ, ಬೆಂಗಳೂರಿನ ಗೋಪಾಲನಗರ, ಉತ್ತರಹಳ್ಳಿ, ಬೆಂಗಳೂರು ಗ್ರಾಮಾಂತರದ ಹೊಸಕೋಟೆ, ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಮಂಗಳೂರಿನಲ್ಲಿ 36.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
Related Articles
Advertisement