Advertisement
ಮೂರನೇ ದಿನದ ಅಂತ್ಯಕ್ಕೆ ನ್ಯೂಜಿಲ್ಯಾಂಡ್ ತಂಡ ಎರಡು ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ಈಗಾಗಲೇ ಮೊದಲ ದಿನ ಮಳೆಯಿಂದಾಗಿ ಸಂಪೂರ್ಣವಾಗಿ ರದ್ದಾಗಿತ್ತು. ಹೀಗಾಗಿ ಹೆಚ್ಚುವರಿ ದಿನವನ್ನು ಅಳವಡಿಸಲಾಗಿದೆ. ಆದರೆ ಎರಡನೇ ದಿನ ಮತ್ತು ಮೂರನೇ ದಿನದಲ್ಲೂ ಮಂದ ಬೆಳಕಿನ ಕಾರಣ ಹೆಚ್ಚಿನ ಆಟ ನಡೆದಿರಲಿಲ್ಲ. ಇದೀಗ ನಾಲ್ಕನೇ ದಿನವೂ ಮಳೆ ಕಾಟ ಕೊಟ್ಟಿದೆ.
Related Articles
Advertisement
ಬ್ಯಾಟಿಂಗ್ ಆರಂಭಿಸಿದ್ದ ಕಿವೀಸ್ ಗೆ ಡೆವೋನ್ ಕಾನ್ವೆ ಮತ್ತು ಲಾಥಂ ಉತ್ತಮ ಆರಂಭ ಒದಗಿಸಿದ್ದರು. ಕಾನ್ವೇ ಅರ್ಧಶತಕ ಬಾರಿಸಿದ್ದರು. ಸದ್ಯ ನಾಯಕ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಅಜೇಯರಾಗಿದ್ದಾರೆ.