Advertisement
ಸುಳ್ಯ ತಾಲೂಕು ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಬುಧವಾರ ಸಂಜೆ ಸಾಧಾರಣ ಮಳೆಯಾಗಿದೆ. ಕಡಬ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಅರ್ಧ ಗಂಟೆಗೂ ಅಧಿಕ ಸಮಯ ಮಳೆಯಾಗಿದೆ. ಸುಳ್ಯ ನಗರ, ಅರಂತೋಡು, ಸಂಪಾಜೆ, ಮಂಡೆಕೋಲು, ಜಾಲ್ಸೂರು, ಬೆಳ್ಳಾರೆ, ಪಂಜ, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ, ಸುಬ್ರಹ್ಮಣ್ಯ, ಬಳ್ಪ, ಎಡಮಂಗಲ, ಬಿಳಿನೆಲೆ ಭಾಗದಲ್ಲಿ ಸಾಧರಣ ಮಳೆಯಾಗಿದೆ. ಕಡಬ, ಕಲ್ಲುಗುಡ್ಡೆ, ನೂಜಿಬಾಳ್ತಿಲ, ರೆಂಜಿಲಾಡಿ ಭಾಗದಲ್ಲಿ ಸಂಜೆ ವೇಳೆ ಉತ್ತಮ ಮಳೆಯಾಗಿದೆ.
Related Articles
ಪುತ್ತೂರು: ಚಿಕ್ಕಮುಟ್ನೂರು ಗ್ರಾಮದ ಕೊಲ್ಯದಲ್ಲಿ ಮಂಗಳವಾರ ರಾತ್ರಿ ಸಿಡಿಲು ಬಡಿದು ಪೂವಪ್ಪ ಗೌಡ ಅವರ ಮನೆ ಹಾಗೂ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಮನೆಯೊಳಗಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಬನ್ನೂರು ಗ್ರಾ.ಪಂ. ಅಧ್ಯಕ್ಷೆ ಸ್ಮಿತಾ ನಾಯ್ಕ, ಉಪಾಧ್ಯಕ್ಷ ಶೀನಪ್ಪ ಕುಲಾಲ್, ಸದಸ್ಯ ತಿಮ್ಮಪ್ಪ ಪೂಜಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Advertisement
5 ಮನೆಗಳಿಗೆ ಸಿಡಿಲಾಘಾತಬಂಟ್ವಾಳ: ತಾಲೂಕಿನೆಲ್ಲಡೆ ಮಂಗಳವಾರ ರಾತ್ರಿ ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದ್ದು, ಈ ಸಂದರ್ಭ ಸಿಡಿಲು ಬಡಿದು 5 ಮನೆಗಳಿಗೆ ಹಾನಿಯಾಗಿದೆ. ಬಾಳ್ತಿಲ ಗ್ರಾಮದ ಸುಧೆಕಾರಿನ ಶೀನ ಅವರ ಮನೆಯ ವಿದ್ಯುತ್ ಸಂಪರ್ಕಕ್ಕೆ ಸಿಡಿಲು ಬಡಿದು ಹಾನಿಯಾಗಿದೆ. ವಿದ್ಯುತ್ ಪರಿಕರಣಗಳು ಸುಟ್ಟು ಹೋಗಿವೆ. ಇಡ್ಕಿದು ಗ್ರಾಮದ ಅರ್ಕೆಚಾರುನಲ್ಲಿ ಥಾಮಸ್ ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ. ಬೋಳಂತೂರು ಗ್ರಾಮದ ಸುರಿಬೈಲಿನ ಅಬ್ದುಲ್ ಖಾದರ್ ಅವರ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಫೈಬರ್ ಶೀಟ್‌ಗಳು ಹಾನಿಗೀಡಾಗಿವೆ. ಸಾಲೆತ್ತೂರು ಗ್ರಾಮದ ಮೆದು ಕೂಡುರಸ್ತೆಯಲ್ಲಿ ಹಮೀದ್ ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಸಜೀಪಮುನ್ನೂರು ಗ್ರಾಮದ ಆಲಾಡಿಯಲ್ಲಿ ಅಬ್ದುಲ್ ರಝಾಕ್ ಅವರ ಮನೆಯ ಗೋಡೆ ಬಿರುಕು ಬಿಟ್ಟಿದೆ.