Advertisement

ಮಳೆಗೆ ಕೊಚ್ಚಿ ಹೋದ ಕಾಫಿ ಬೆಳೆ

02:32 PM Jan 05, 2021 | Team Udayavani |

ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನಾದ್ಯಂತ ಭಾನುವಾರ ರಾತ್ರಿ ಸುರಿದ ದಿಢೀರ್‌ ಮಳೆಯಿಂದಾಗಿ ಕಾಫಿ ಹಾಗೂ ಭತ್ತದ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.

Advertisement

ತರುವೆ, ಅತ್ತಿಗೆರೆ, ಬಾಳೂರು, ಬಿನ್ನಡಿ, ಕುಂದೂರು ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಕಣದಲ್ಲಿ ಒಣ ಹಾಕಿದ ಕಾಫಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಹಲವೆಡೆ ಭತ್ತದಕೊಯ್ಲು ಪ್ರಾರಂಭವಾಗಿದ್ದು ಬಹುತೇಕ ರೈತರು ಭತ್ತಹಾಗೂ ಹುಲ್ಲನ್ನು ಗದ್ದೆಯಲ್ಲಿಯೇ ಸಂಗ್ರಹಿಸಿದ್ದರು. ಭತ್ತ ಒಕ್ಕಲು ಮಾಡಲು ಸಿದ್ಧತೆ ನಡೆಸಿದ್ದರು. ಆದರೆ ದಿಢೀರ್‌ ಬಂದ ಮಳೆಯಿಂದಾಗಿ ಭತ್ತ ಹಾಗೂ ಹುಲ್ಲು ನೆನೆದು ಹೋಗಿದೆ.

ಮಳೆಯಿಂದ ಭತ್ತ ಮಣ್ಣು ಪಾಲಾಗಿದ್ದು ಹುಲ್ಲು ಮಳೆಯಿಂದಾಗಿ ಕಪ್ಪಾಗಿ ಕ್ರಮೇಣಕಹಿಯಾಗುವುದರಿಂದ ಜಾನುವಾರುಗಳಿಗೂ ನೀಡಲು ಸಾಧ್ಯವಿಲ್ಲ. ಕಾಫಿ ಬೆಳೆಗಾರರು ಕಣದಲ್ಲಿ ಒಣ ಹಾಕಿದ್ದ ಕಾಫಿಯನ್ನು ಮಳೆಯಿಂದ ರಕ್ಷಿಸಲು ಹರಸಾಹಸ ಪಡುವಂತಾಯಿತು. ಸಣ್ಣ ಕಾಫಿ ಬೆಳೆಗಾರರು ಸ್ಪಲ್ಪ ಪ್ರಮಾಣದಲ್ಲಿ ಹರಡಿದಕಾಫಿಯನ್ನು ಒಟ್ಟು ಮಾಡಿ ಟಾರ್ಪಲ್‌ನಲ್ಲಿ ಮುಚ್ಚಿ ಕಾಫಿಯನ್ನು ಮಳೆ ನೀರಿನಿಂದ ರಕ್ಷಿಸಿದರೆ ದೊಡ್ಡ ಎಸ್ಟೇಟ್‌ಗಳ ಕಾಫಿ ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಕಣದಲ್ಲಿ ಹರಡಿದ ಕಾಫಿಯನ್ನು ಮಳೆಯಿಂದ ರಕ್ಷಿಸಲಾಗದೆ ಕೈಚೆಲ್ಲಿದರು. ಕಣದ ಅಂಚಿನಲ್ಲಿ ಮಳೆನೀರಿನ ಜೊತೆಗೆ ಕೊಚ್ಚಿ ಹೋಗುತ್ತಿದ್ದಕಾಫಿಯನ್ನು ಜಾಲರಿಬುಟ್ಟಿ ಇಟ್ಟು ಸಂಗ್ರಹಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಅಕಾಲಿಕ ಮಳೆಯಿಂದ ಹೂ ಅರಳಲಿದ್ದು ಇದೇ ಸಮಯದಲ್ಲಿ ಕಾಫಿ ಕೊಯ್ಲನ್ನುಮಾಡುತ್ತಿರುವುದರಿಂದ ಕಾಫಿ ಕೊಯ್ಲಿನ ಸಮಯದಲ್ಲಿ ಗಿಡದಲ್ಲಿರುವ ಹೂವಿಗೆಹಾನಿಯಾಗಲಿದೆ. ಅಳಿದುಳಿದ ಹೂವುಗಳುಕಾಯಿಗಟ್ಟಿದರೂ ಮುಂದಿನ ವರ್ಷದ ಮಳೆಗಾಲದಲ್ಲಿಯೇ ಕಾಫಿ ಕೊಯ್ಲಿಗೆ ಬರುವುದರಿಂದ ಮತ್ತೆ ಮಳೆಗೆ ಕಾಫಿ  ಬೆಳೆ ನೆಲ ಕಚ್ಚುವ ಸಂಭವವಿದೆ.ಈ ಬಗ್ಗೆ ಮಾತನಾಡಿದ ಕೃಷಿಕರಾದಸಂಜಯಗೌಡ, ಸಾಮಾನ್ಯವಾಗಿ ಭತ್ತದ ಕೊಯ್ಲುಆದ ನಂತರ ಗದ್ದೆಯಲ್ಲಿಯೇ ಒಣಗಲು ಬಿಟ್ಟು ಒಂದು ವಾರದ ನಂತರ ಕಣಕ್ಕೆ ಸಾಗಿಸಲಾಗುತ್ತದೆ. ಆದರೆ ಭಾನುವಾರವಷ್ಟೇ ಗದ್ದೆ ಕೊಯ್ಲುಮಾಡಿದ್ದೆವು. ಆದರೆ ಭಾನುವಾರ ರಾತ್ರಿ ಸುರಿದಮಳೆಯಿಂದ ಗದ್ದೆಯಲ್ಲಿ ಕೊಯ್ಲು ಮಾಡಿ ಹಾಕಿದ್ದಭತ್ತದ ಪೈರು ನೆನೆದು ಹೋಗಿದೆ ಎಂದು ಅಳಲು ತೋಡಿಕೊಂಡರು.

ಇನ್ನೂ ಎರಡು ದಿನ ಚಿಕ್ಕಮಗಳೂರು ಜಿಲ್ಲಾದ್ಯಂತ ಭಾರೀ ಮಳೆಯಾಗುವಸಂಭವವಿದೆ. ಗದ್ದೆ ಕೊಯ್ಲು, ಕಾಫಿ ಕೊಯ್ಲನ್ನು ಎರಡು ದಿನಗಳ ಕಾಲ ಮುಂದೂಡುವುದು ಸೂಕ್ತ. – ಪ್ರವೀಣ್‌, ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ ಮೂಡಿಗೆರೆ

Advertisement

ಅಕಾಲಿಕ ಮಳೆಯಿಂದ ಬೆಳೆಹಾನಿಯಾಗಿರುವ ಬಗ್ಗೆ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲಾಗುವುದು. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆಯಲಾಗುವುದು.  –ಎಂ.ಪಿ. ಕುಮಾರಸ್ವಾಮಿ, ಶಾಸಕ, ಮೂಡಿಗೆರೆ

Advertisement

Udayavani is now on Telegram. Click here to join our channel and stay updated with the latest news.

Next