ಹೊಸದಿಲ್ಲಿ: ದೇಶದ ರೈಲು ಸಾಗಣೆ ವ್ಯವಸ್ಥೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಮಿಷನ್ ರಫ್ತಾರ್ ಎಂಬ ಹೊಸ ಗುರಿಯೊಂದನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಇದರಡಿ, ಈಗಿರುವ ಗೂಡ್ಸ್ ರೈಲುಗಳು ಸರಾಸರಿ ವೇಗವನ್ನು ದುಪ್ಪಟ್ಟು ನಿಗದಿಗೊಳಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ, ಸೂಪರ್ ಫಾಸ್ಟ್, ಮೈಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳ ಸರಾಸರಿ ವೇಗವನ್ನೂ ಇಮ್ಮಡಿಗೊಳಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸಭೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
“”ಮುಖ್ಯವಾಗಿ, ರೈಲುಗಳು ನಿಗದಿತ ಸಮಯಕ್ಕೆ ಸರಿಯಾಗಿ ರೈಲು ನಿಲ್ದಾಣಗಳಿಗೆ ಆಗಮಿಸುವಂತೆ ಮಾಡುವುದು ರಫ್ತಾರ್ ಯೋಜನೆಯ ಪ್ರಮುಖ ಉದ್ದೇಶ. ಕೇವಲ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಮಾತ್ರವಲ್ಲ ಸರಕು ಸಾಗಣೆಯೂ ಕೂಡ ತ್ವರಿತವಾಗಿ ಆಗಬೇಕೆಂಬ ಗುರಿಯೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದರು.
8 ವರ್ಷಗಳಲ್ಲಿ ವೈದ್ಯ ಸೀಟುಗಳು ದ್ವಿಗುಣ: “ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ವೈದ್ಯ ವ್ಯಾಸಂಗದ ಸೀಟುಗಳನ್ನು ದ್ವಿಗುಣಗೊಳಿಸಲಾಗಿದೆ.
2014ರಲ್ಲಿ 51 ಲಕ್ಷದಷ್ಟಿದ್ದ ಸೀಟುಗಳು ಇಂದು 1 ಲಕ್ಷ ದಾಟಿವೆ’ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಅವರು, ರಾಜ್ಯಸಭೆಗೆ ತಿಳಿಸಿದ್ದಾರೆ. “2022ರ ಆರೋಗ್ಯ ವಿಧೇಯಕ’ ಮಂಡನೆ ವೇಳೆ ಸಚಿವರು ಈ ವಿಚಾರ ತಿಳಿಸಿದ್ದಾರೆ.