Advertisement

Railways: ಹಾಸನದಲ್ಲಿ ರೈಲ್ವೇ ಕಾಮಗಾರಿ; ಬೆಂಗಳೂರು-ಮಂಗಳೂರು/ಕಾರವಾರ ರೈಲು ವ್ಯತ್ಯಯ

01:15 AM Dec 13, 2023 | Team Udayavani |

ಮಂಗಳೂರು: ನೈಋತ್ಯ ರೈಲ್ವೇಯು ಹಾಸನದ ರೈಲ್ವೇ ಯಾರ್ಡ್‌ನಲ್ಲಿ ಯಾರ್ಡ್‌ ಮರುವಿನ್ಯಾಸ, ಸಿಗ್ನಲ್‌ ಮತ್ತು ಇಂಟರ್‌ಲಾಕಿಂಗ್‌ ವ್ಯವಸ್ಥೆಯ ಸುಧಾರಣ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು – ಮಂಗಳೂರು ಮಧ್ಯೆ ಡಿ. 14ರಿಂದ ಡಿ. 22ರ ವರೆಗೆ ಕೆಲವು ರೈಲುಗಳ ಓಡಾಟ ಸ್ಥಗಿತಗೊಳ್ಳಲಿದೆ.

Advertisement

ಬೆಂಗಳೂರು ಕಣ್ಣೂರು ಬೆಂಗಳೂರು ರೈಲು, ಬೆಂಗಳೂರು ಕಾರವಾರ ಬೆಂಗಳೂರು ಪಂಚಗಂಗಾ ರಾತ್ರಿ ರೈಲುಗಳು ರದ್ದಾಗಿವೆ. 16511 ಬೆಂಗಳೂರು ಕಣ್ಣೂರು ಮತ್ತು 16595 ಬೆಂಗಳೂರು ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್‌ಗಳು ಡಿ. 16ರಿಂದ 20ರ ವರೆಗೆ ರದ್ದಾದರೆ ಇವುಗಳ ಜೋಡಿ ರೈಲುಗಳಾದ 16512 ಮತ್ತು 16596 ಡಿ. 17ರಿಂದ 21ರ ವರೆಗೆ ರದ್ದಾಗಲಿದೆ.

ನಂ. 16575 ಯಶವಂತಪುರ ಮಂಗಳೂರು ಜಂಕ್ಷನ್‌ ಗೋಮಟೇಶ್ವರ (ವಾರಕ್ಕೆ ಮೂರು ದಿನ) ಎಕ್ಸ್‌ಪ್ರೆಸ್‌ ಡಿ. 14, 17, 19 ಮತ್ತು 21 ರಂದು ಸಂಚರಿಸುವುದಿಲ್ಲ. ಇದರ ಜತೆ ರೈಲಾ ಗಿರುವ 16576 ಡಿ. 15, 18, 20, 22ರಂದು ಸಂಚರಿಸುವುದಿಲ್ಲ. ನಂ. 16515 ಯಶವಂತಪುರ ಕಾರವಾರ ಟ್ರೈವೀಕ್ಲಿ ಎಕ್ಸ್‌ಪ್ರೆಸ್‌ ಡಿ. 13, 15, 18, 20, 22ರಂದು, ನಂ. 16516 ಕಾರವಾರ ಯಶ ವಂತ ಪುರ ಟ್ರೈವೀಕ್ಲಿ ಎಕ್ಸ್‌ಪ್ರೆಸ್‌ ಡಿ. 14, 16, 19, 21 ಮತ್ತು 23ರಂದು ಓಡುವುದಿಲ್ಲ. ನಂ. 16539/16540 ಯಶವಂತಪುರ ಮಂಗಳೂರು ಜಂಕ್ಷನ್‌ ವೀಕ್ಲಿ ಎಕ್ಸ್‌ಪ್ರೆಸ್‌ ಡಿ.16-17ರಂದು ಇಲ್ಲ.

ಸದ್ಯಕ್ಕೆ ಈ ಭಾಗದಲ್ಲಿ ಸಂಚರಿಸುವ ರೈಲು ನಂ. 16585/586 ಬೆಂಗಳೂರು- ಮುರು ಡೇಶ್ವರ- ಬೆಂಗಳೂರು ಮಾತ್ರವೇ ಆಗಿರುತ್ತದೆ. ಆದರೆ ಇದು ಮೈಸೂರು ಭಾಗವನ್ನು ಈ ಅವಧಿಯಲ್ಲಿ ಸಂಪರ್ಕಿಸಲಾರದು.

Advertisement

Udayavani is now on Telegram. Click here to join our channel and stay updated with the latest news.

Next