Advertisement
ಬೆಂಗಳೂರು- ಕಾರವಾರ ಪ್ರಯಾಣ ಸಂದರ್ಭ ಅ. 28ರಿಂದ 30ರ ತನಕ ಹಾಗೂ ಕಾರವಾರ – ಬೆಂಗಳೂರು ಪ್ರಯಾಣ ಸಂದರ್ಭ ಅ. 29ರಿಂದ 31ರ ತನಕ ಈ ಹೆಚ್ಚುವರಿ ಬೋಗಿ ಸೇವೆಯು ಲಭ್ಯವಾಗಲಿದೆ. ಹೊಸ ಸೇರ್ಪಡೆಯ ಎಸಿ ಬೋಗಿಗಳು ಸಹಿತ ಒಂದು ಫಸ್ಟ್ ಎಸಿ, ಒಂದು 2-ಟೈರ್ ಎಸಿ, ನಾಲ್ಕು 3-ಟೈರ್ ಎಸಿ, ಏಳು ಸ್ಲೀಪರ್, ಎರಡು ಜನರಲ್, ಒಂದು ಲಗೇಜ್-ಕಮ್-ಬ್ರೇಕ್ ವ್ಯಾನ್ ಮತ್ತು ಒಂದು ಜನರೇಟರ್ ಕಾರ್ (ಒಟ್ಟು 17 ಎಲ್ಎಚ್ಬಿ) ಬೋಗಿಗಳು ಈ ರೈಲಿನಲ್ಲಿ ಇರಲಿದೆ.
ಮಂಗಳೂರು: ಕೇಂದ್ರ ರೈಲ್ವೇಯು ಲೋಕಮಾನ್ಯ ತಿಲಕ್ ಟರ್ಮಿನಸ್-ತಿರುವನಂತಪುರ ಉತ್ತರ (ಕೊಚ್ಚುವೇಲಿ) ಉತ್ಸವ ವಿಶೇಷ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ನಂ. 01463 ಲೋಕಮಾನ್ಯ ತಿಲಕ್ ಟರ್ಮಿನಸ್-ಕೊಚ್ಚುವೇಲಿ ವಿಶೇಷ ರೈಲು ಲೋಕಮಾನ್ಯ ತಿಲಕ್ನಿಂದ ಅ. 24, 31, ನ. 7, 14ರಂದು (ಗುರುವಾರ) ಸಂಜೆ 4ಕ್ಕೆ ಹೊರಟು ಕೊಚ್ಚುವೇಲಿಗೆ ರಾತ್ರಿ 10.45ಕ್ಕೆ ತಲಪಲಿದೆ. ಪರಿಷ್ಕೃತ ವೇಳೆ ಹೀಗಿದೆ:
ಲೋಕಮಾನ್ಯ ತಿಲಕ್ ಟರ್ಮಿನಸ್ನಿಂದ ಸಂಜೆ 4ಕ್ಕೆ ಹೊರಟು ಮಡಗಾಂವ್ ಜಂಕ್ಷನ್ (ಬೆಳಗ್ಗೆ 3), ಕಾರವಾರ (ಬೆ. 4), ಕುಮಟಾ(ಬೆ. 5), ಮುರುಡೇಶ್ವರ(ಬೆ. 6.10), ಮೂಕಾಂಬಿಕಾ ರೋಡ್ ಬೈಂದೂರು(ಬೆ. 6.30), ಕುಂದಾಪುರ (7.40), ಉಡುಪಿ (ಬೆ. 8), ಮಂಗಳೂರು ಜಂಕ್ಷನ್ (ಬೆ. 9.45), ಕಾಸರಗೋಡು (10.29), ಕಣ್ಣೂರು(11.47) ಮೂಲಕ ಕೊಚ್ಚುವೇಲಿಗೆ ರಾತ್ರಿ 10.45ಕ್ಕೆ ತಲಪುವುದು.