Advertisement
4 ಮಾರ್ಗಗಳಲ್ಲಿ ಸಂಚಾರಪ್ರಸ್ತುತ ನಾಲ್ಕು ಮಾರ್ಗಗಳಲ್ಲಿ ಈ ರೈಲುಗಳು ಚಲಿಸುತ್ತಿವೆ. ಕಳೆದ ವರ್ಷದ ಬಜೆಟ್‌ನಲ್ಲಿ ಈ ಯೋಜನೆ ಘೋಷಿಸಲಾಗಿತ್ತು.ಪ್ರಾಯೋಗಿಕವಾಗಿ ಕಳೆದ ವರ್ಷದ ಮಾ.31ರಂದು ಸೂರತ್ ಮತ್ತು ವಾರಾಣಸಿ ನಡುವೆ ಸಾಪ್ತಾಹಿಕ ಸೇವೆ ಆರಂಭವಾಗಿತ್ತು. ಈಗ ಅಂದರೆ ಫೆ.16ರಿಂದ ಬೆಂಗಳೂರು-ಗುವಾಹಟಿ, ದೆಹಲಿ-ಕೋಲ್ಕತಾ, ಸೂರತ್-ಮುಜಾಫರ್‌ಪುರ್ ಮತ್ತು ಹೈದರಾಬಾದ್-ಹಜರತ್ ನಿಜಾಮುದ್ದೀನ್ ಮಾರ್ಗಗಳಲ್ಲಿ ಸೇವೆ ಆರಂಭವಾಗಿದೆ.
ಭಾರತೀಯ ಅಂಚೆ ಇಲಾಖೆಯು ಗ್ರಾಹಕರ ಮನೆ ಬಾಗಿಲಿನಿಂದ ಪಾರ್ಸೆಲ್ ಪಡೆಯುತ್ತದೆ. ನಂತರ ಅದನ್ನು ಸಮೀಪದ ರೈಲು ನಿಲ್ದಾಣಕ್ಕೆ ಒಯ್ಯಲಾಗುತ್ತದೆ. ನಿಗದಿತ ರೈಲು ನಿಲ್ದಾಣ ಬಂದ ಕೂಡಲೇ ಪಾರ್ಸೆಲ್ ಇಳಿಸಿ, ತಲುಪಬೇಕಾದ ಸ್ಥಳಕ್ಕೆ ಅದನ್ನು ಡೆಲಿವರಿ ಮಾಡಲಾಗುತ್ತದೆ. ಸೇವೆಯ ಕುರಿತು…
– ದೇಶದ ಸೇವಾ ವಲಯಕ್ಕೆ ತಡೆರಹಿತ ಲಾಜಿಸ್ಟಿಕ್ಸ್ ಸೇವೆ ಒದಗಿಸಲು ಈ ಉಪಕ್ರಮ.
– ಮೊದಲ ಹಂತದಲ್ಲಿ 15 ಮಾರ್ಗಗಳಲ್ಲಿ ಶೀಘ್ರ ಸೇವೆ ಆರಂಭ.
– ಲಗೇಜ್ ತೂಕಕ್ಕೆ ಯಾವುದೇ ಮಿತಿ ಇಲ್ಲ. ಬಾಕ್ಸ್‌ಗಳಲ್ಲಿ ಇರಿಸಿ ಸೀಲ್ ಮಾಡಿ ಸುರಕ್ಷಿತವಾಗಿ ಡೆಲಿವರಿ ಮಾಡಲಾಗುತ್ತದೆ.
– ನಿಗದಿತ ಸಮಯಕ್ಕೆ ರೈಲು ಹೊರಟು, ನಿಗದಿತ ಸಮಯಕ್ಕೆ ತಲುಪಬೇಕಾದ ನಿಲ್ದಾಣ ತಲುಪಲಿದೆ.
– ಅಂಚೆ ಇಲಾಖೆಯಿಂದ ಪಾರ್ಸೆಲ್‌ಗೆ ಥರ್ಡ್ ಪಾರ್ಟಿ ವಿಮೆ ಸೌಲಭ್ಯವನ್ನೂ ಒದಗಿಸಲಾಗುತ್ತದೆ.
– ಪಾರ್ಸೆಲ್ ಕೆಜಿಗೆ ಕೇವಲ 6 ರೂ. ಚಾರ್ಜ್ ಮಾಡಲಾಗುತ್ತದೆ. ಗ್ರಾಹಕರು ತಮ್ಮ ಪಾರ್ಸೆಲ್ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆಯೂ ಇದೆ.
– ಇದಕ್ಕಾಗಿಯೇ ಪ್ರತ್ಯೇಕ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರಾಹಕರು ಆ್ಯಪ್ ಸಹಾಯದಿಂದ ಬುಕ್ಕಿಂಗ್, ಟ್ರ್ಯಾಕ್ ಮಾಡಬಹುದು.