Advertisement

ರಾಯಚೂರಲ್ಲಿ ಮತ್ತೆ 35 ಜನರಲ್ಲಿ ಸೋಂಕು ಪತ್ತೆ

11:49 AM Jun 04, 2020 | Naveen |

ರಾಯಚೂರು: ಕೋವಿಡ್ ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯಲ್ಲಿ ಏರುತ್ತಲೇ ಸಾಗುತ್ತಿದ್ದು, ಬುಧವಾರ ಮತ್ತೆ 35 ಪ್ರಕರಣ ದೃಢಪಟ್ಟಿವೆ. ಅಲ್ಲಿಗೆ ಜಿಲ್ಲೆಯಲ್ಲಿ 268 ಜನರಿಗೆ ಸೋಂಕು ತಗುಲಿದಂತಾಗಿದೆ. 35 ಜನರಲ್ಲಿ 30 ಜನ ಮುಂಬೈನಿಂದ ಬಂದರವಾಗಿದ್ದು, ದೇವದುರ್ಗ ತಾಲೂಕಿನವರಾಗಿದ್ದಾರೆ. ಇನ್ನುಳಿದ ಐವರು ಸೋಂಕಿತರ ಸಂಪರ್ಕ ಹೊಂದಿದ್ದವರಿಗೆ ಪಾಸಿಟಿವ್‌ ಬಂದಿದೆ. ಇನ್ನೂ ಮಸ್ಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ಗೆ ಒಳಪಟ್ಟಿದ್ದ ಮೂವರು ತಪ್ಪಿಸಿಕೊಂಡು ಹೋಗಿದ್ದಾರೆ. ಅವರ ವಿರುದ್ಧ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

ದೇವದುರ್ಗ ತಾಲೂಕಿನಿಂದ 176, ಲಿಂಗಸುಗೂರು ತಾಲೂಕಿನಿಂದ 97, ಮಾನ್ವಿ ತಾಲೂಕಿನಿಂದ 38 ಮತ್ತು ರಾಯಚೂರು ತಾಲೂಕಿನಿಂದ 30 ಸೇರಿದಂತೆ ಬುಧವಾರ 341 ಜನರ ಗಂಟಲಿನ ದ್ರವ ಮಾದರಿಯನ್ನು ಕೋವಿಡ್‌-19 ಶಂಕೆ ಹಿನ್ನೆಲೆಯಲ್ಲಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಕೋವಿಡ್‌-19 ಫಲಿತಾಂಶಕ್ಕಾಗಿ ಕಳುಹಿಸಿದ್ದ ಫಲಿತಾಂಶಗಳಲ್ಲಿ ಬುಧವಾರ ಬಂದ ವರದಿಗಳಲ್ಲಿ 1,011 ನೆಗೆಟಿವ್‌ ಬಂದಿವೆ. ಜಿಲ್ಲೆಯಿಂದ ಈವರೆಗೆ 16,560 ಜನರ ಗಂಟಲಿನ ದ್ರವ್ಯ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಕಳುಹಿಸಿದ್ದು, ಅವುಗಳಲ್ಲಿ 15,141 ವರದಿಗಳು ನೆಗೆಟಿವ್‌ ಬಂದರೆ, 1,145 ಮಾದರಿಗಳ ಫಲಿತಾಂಶ ಬರಬೇಕಿದೆ. ಫೀವರ್‌ ಕ್ಲಿನಿಕ್‌ಗಳಲ್ಲಿ ಬುಧವಾರ 707 ಜನರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ತಿಳಿಸಿದ್ದಾರೆ.

70 ವಲಸೆಗಾರರ ಆಗಮನ: ಮಹಾರಾಷ್ಟ್ರದಿಂದ ಮಂಗಳವಾರ ರಾತ್ರಿ ಬಂದ ಉದ್ಯಾನ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ 48 ಜನ, ತಿರುಪತಿ ನಿಜಾಮಬಾದ್‌ ರೈಲಿನ ಮೂಲಕ 26 ಹಾಗೂ ನಿಜಾಮಬಾದ್‌ ತಿರುಪತಿ ರೈಲಿನ ಮೂಲಕ 6 ಜನರು ಸೇರಿ 70 ವಲಸೆಗಾರರು ಆಗಮಿಸಿದ್ದಾರೆ. ರೈಲು ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರನ್ನು ಸ್ಟ್ಯಾಂಪಿಂಗ್‌ ಮತ್ತು ಹೆಲ್ತ್‌ ಸ್ಕ್ರೀನಿಂಗ್‌ ಮಾಡಿ ನಿಗದಿತ ಸಾಂಸ್ಥಿಕ ಕ್ವಾರಂಟೈನ್‌, ಗೃಹ ಕ್ವಾರಂಟೈನ್‌, ವಸತಿಗೃಹ ದಿಗ್ಭಂದನಕ್ಕೆ ಒಳಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.