Advertisement

Chamarajnagar: ತೂಕ ಇಳಿಸಿಕೊಳ್ಳಲು ಪೊಲೀಸರಿಗೆ ಬೆಟ್ಟ ಹತ್ತುವ ವ್ಯಾಯಾಮ!

04:07 AM Jan 14, 2025 | Team Udayavani |

ಚಾಮರಾಜನಗರ: ಕಾನೂನು ಸುವ್ಯವಸ್ಥೆ ಕಾಪಾಡಲು ಹಗಲಿ ರುಳು ಕೆಲಸ ಮಾಡುತ್ತಾ ದೈಹಿಕ ಮತ್ತು ಮಾನಸಿಕ ಆರೋಗ್ಯ ಕುಂದುತ್ತಿರುವ ಪೊಲೀಸರಲ್ಲಿ ಚೈತನ್ಯ ಮೂಡಿಸಿ, ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕವಿತಾ ಅವರು ಪೊಲೀಸ್‌ ಸಿಬಂದಿಗೆ ನಿತ್ಯವೂ ನಗರದ ಕರಿವರದಸ್ವಾಮಿ ಬೆಟ್ಟವನ್ನು ಹತ್ತಿಳಿಯುವ ಟಾಸ್ಕ್ ನೀಡಿದ್ದಾರೆ!

Advertisement

ಬೆಟ್ಟಕ್ಕೆ ನಸುಕಿನಲ್ಲಿ ತೆರಳಿ ಬೆಟ್ಟ ಹತ್ತುತ್ತಿದ್ದು, ಇದರಿಂದ ಹಲವು ಪೊಲೀಸರ ಬೊಜ್ಜು ಕರಗಿದೆ. ಆರೋಗ್ಯವೂ ಸುಧಾರಿ ಸಿದೆ. ನಗರದ ಮಹಿಳಾ ಠಾಣೆ, ನಗರ, ಗ್ರಾಮಾಂತರ, ಪೂರ್ವ, ಪಟ್ಟಣ, ಸೆನ್‌, ಡಿಸಿಆರ್‌ಬಿ, ಡಿಎಆರ್‌ನ 34 ಅಧಿಕಾರಿಗಳ ಹಾಗೂ ಸಿಬಂದಿಯ ದೇಹ ತೂಕ ಇಳಿದಿದೆ.

ಎರಡು ತಿಂಗಳಿನಿಂದ ನಿರಂತರವಾಗಿ ಚಾರಣ ನಡೆಯುತ್ತಿದೆ. ತುರ್ತು ಸಿಬಂದಿಯನ್ನು ಹೊರತುಪಡಿಸಿ, ಪ್ರತೀ ದಿನ ತಲಾ ಒಂದು ಠಾಣೆಯ 20ರಿಂದ 25 ಅಧಿಕಾರಿಗಳು ಹಾಗೂ ಸಿಬಂದಿ ಭಾಗವಹಿಸುತ್ತಿದ್ದಾರೆ. ಬೆಳಗ್ಗೆ 6.30ರಿಂದ 9.15ರ ವರೆಗೂ 6 ಕಿ.ಮೀ. ಚಾರಣ ನಡೆಸಲಾಗುತ್ತದೆ.

ಪೊಲೀಸರು ಸದಾ ಒತ್ತಡದ ಕೆಲಸದ ನಡುವೆ ಆರೋಗ್ಯದ ಕಡೆ ಗಮನ ಕೊಡುವುದಿಲ್ಲ. ಬೆಳಗಿನ ಬೆಟ್ಟ ಚಾರಣದಿಂದ ಅವರ ಆರೋಗ್ಯ ಸುಧಾರಣೆ ಕಂಡಿದೆ ಎನ್ನುತ್ತಾರೆ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಬಿ.ಟಿ. ಕವಿತಾ.

Advertisement

Udayavani is now on Telegram. Click here to join our channel and stay updated with the latest news.