Advertisement

ಕಲ್ಯಾಣದಲ್ಲಿ ಅಯೋಧ್ಯೆ ಸಂಭ್ರಮ : ಅಹಿತಕರ ಘಟನೆ ನಡೆಯದಂತೆ ನಿಷೇಧಾಜ್ಞೆ

10:47 AM Aug 06, 2020 | sudhir |

ರಾಯಚೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರುತ್ತಿದ್ದರೆ ಜಿಲ್ಲೆಯಲ್ಲೂ ಸಡಗರ ಮನೆ ಮಾಡಿತ್ತು. ಯಾವುದೇ ಅಹಿತಕರ ನಡೆಯದಂತೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದ್ದರೆ, ವಿವಿಧೆಡೆ ಪೂಜೆ ಸಲ್ಲಿಸುವ ಮೂಲಕ ಸಂತಸ ವ್ಯಕ್ತಪಡಿಸಲಾಯಿತು.

Advertisement

ಜಿಲ್ಲಾ ಬಿಜೆಪಿ ಘಟಕದಿಂದ ನಗರದ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀರಾಮನ
ಬೃಹತ್‌ ಮೂರ್ತಿಗೆ ಮುಖಂಡರು ಪೂಜೆ ಸಲ್ಲಿಸುವ ಮೂಲಕ ಸಂಭ್ರಮಿಸಿದರು. ಇನ್ನೂ ನೂತನ ರಾಜಸಭೆ ಸದಸ್ಯ ಅಶೋಕ ಗಸ್ತಿ ತಮ್ಮ ಮನೆಯಲ್ಲಿಯೇ ರಾಮನ ಪೂಜೆ ನೆರವೇರಿಸುವ ಮೂಲಕ ಸಂಭ್ರಮಿಸಿದರು. ಇನ್ನೂ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು ಮಂದಿರ ನಿರ್ಮಾಣಕ್ಕೆ ಜಿಲ್ಲೆಯ ವಿ ವಿ
ಧಾರ್ಮಿಕ ತಾಣಗಳಿಂದ ಮೃತ್ತಿಕೆ ಹಾಗೂ ಜಲ ಕಳುಹಿಸಲಾಗಿತ್ತು. ಈ ನಿಮಿತ್ತ ಶ್ರೀ ರಾಮ, ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.

ವ್ಯಾಪಕ ಬೆಂಬಲ: ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮದ ಬಗ್ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಅಯೋಧ್ಯೆ ಸಂಬಂ ಧಿಸಿದ ಸಂಗತಿಗಳೇ ಹರಿದಾಡಿದವು.

Advertisement

Udayavani is now on Telegram. Click here to join our channel and stay updated with the latest news.

Next