ರಾಯಚೂರು: ಆರು ಜಿಲ್ಲೆಗಳನ್ನೊಳಗೊಂಡು ಕೃಷಿ ವಿಷಯಾಧಾರಿತವಾಗಿ ಮೂರು ದಿನಗಳ ಕಾಲ ನಡೆಯುತ್ತಿದ್ದ ಕೃಷಿಮೇಳವನ್ನು ಈ ಬಾರಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕೈಬಿಟ್ಟಿದೆ. ಕೋವಿಡ್-19 ಹಾಗೂ ಅತಿವೃಷ್ಟಿಯಿಂದ ರೈತರಿಗಾದ ಸಮಸ್ಯೆಯಿಂದ ವಿವಿ ನಿರ್ಧಾರಕ್ಕೆಮುಂದಾಗಿದೆ.
ಕೋವಿಡ್-19 ಕಾರಣಕ್ಕೆ ಈ ವರ್ಷ ಯಾವುದೇ ಸರ್ಕಾರಿ ಕಾರ್ಯಕ್ರಮಗಳನ್ನುಅದ್ಧೂರಿಯಾಗಿ ಆಚರಿಸುತ್ತಿಲ್ಲ. ಹಾಗಂತಸಾಂಪ್ರದಾಯಿಕ ಆಚರಣೆಗಳನ್ನು ಕೈಬಿಡದೆಸಾಂಕೇತಿಕವಾಗಿಯಾದರೂ ಆಚರಿಸಿ ಕೈ ಬಿಡಲಾಗುತ್ತಿದೆ.
ಕೃಷಿ ವಿವಿ ನಡೆಸಿದ ಸಂಶೋಧನೆ, ರೈತರ ಸಾಧನೆ, ಹೊಸ ತಳಿಗಳ ವೃದ್ಧಿ, ಕೃಷಿಯಲ್ಲಿನ ಪ್ರಯೋಗ ಹೀಗೆ ನಾನಾ ವಿಷಯಾಧಾರಿತವಾಗಿ ಕೃಷಿ ಮೇಳನಡೆಯುತ್ತಿತ್ತು. ಮೂರು ದಿನಗಳ ಈ ಕಾರ್ಯಕ್ರಮ ದೊಡ್ಡ ಜಾತ್ರೆಯಂತೆ ಭಾಸ ವಾಗುತ್ತಿತ್ತು.2019ರಲ್ಲಿನಡೆದ ಮೇಳದಲ್ಲಿ ಆರು ಲಕ್ಷ ಜನ ಭೇಟಿ ನೀಡಿದ್ದರು. ಈ ಬಾರಿ ಕೋವಿಡ್-19 ಭೀತಿ ಇನ್ನೂ ಇರುವ ಕಾರಣ ವಿವಿ ಈ ಮೇಳವನ್ನೇ ಕೈ ಬಿಟ್ಟಿದೆ.
ಯಶ ಕಾಣದ ಆನ್‌ಲೈನ್ ಮೇಳ: ಲಾಕ್‌ಡೌನ್ ವೇಳೆ ಆನ್‌ಲೈನ್ ವ್ಯವಹಾರ ಜೋರಾಗಿದೆ. ಅದರ ಭಾಗವಾಗಿಯೇ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆನ್‌ಲೈನ್‌ನಲ್ಲಿ ಕೃಷಿ ಮೇಳ ಮಾಡಿತು. ಆದರೆ ಅದುನಿರೀಕ್ಷಿತ ಮಟ್ಟದ ಯಶಸ್ಸು ಕಂಡಿಲ್ಲ ಎನ್ನಲಾಗುತ್ತಿದೆ.ಕೃಷಿ ವಿವಿ ರೈತರ ದೃಷ್ಟಿಯನ್ನಿಟ್ಟುಕೊಂಡೇ ನಡೆಯುವಸಂಸ್ಥೆಯಾಗಿದ್ದು, ಆನ್‌ಲೈನ್‌ನಲ್ಲಿ ಮೇಳ ನಡೆಸಿದರೆಅನಕ್ಷರಸ್ಥ ರೈತರಿಗೆ ತಲುಪುವುದು ಕಷ್ಟವಾಗಲಿದೆ. ಈಕಾರಣಕ್ಕೆ ರಾಯಚೂರು ಕೃಷಿ ವಿವಿ ಮೇಳ ಆಚರಣೆ ಕೈ ಬಿಟ್ಟಿದೆ. ಇದೇ ಮೊದಲಲ್ಲ, ಎರಡು ವರ್ಷದಹಿಂದೆ ಜಿಲ್ಲೆ ಭೀಕರ ಬರಕ್ಕೆ ತುತ್ತಾದಾಗಲೂ ಮೇಳ ಕೈಬಿಡಲಾಗಿತ್ತು.
40 ಲಕ್ಷಕ್ಕೂ ಅಧಿಕ ವಹಿವಾಟು: ಒಂದು ಕೃಷಿ ಮೇಳಕನಿಷ್ಠ ಏನಿಲ್ಲವೆಂದರೂ 40 ಲಕ್ಷಕ್ಕೂ ಅಧಿಕ ವಹಿವಾಟು ನಡೆಸುತ್ತದೆ. ವಾಣಿಜ್ಯ ಉದ್ದೇಶದಿಂದ ಸಾಕಷ್ಟುಕಂಪನಿಗಳು ಮಳಿಗೆ ಬಾಡಿಗೆ ಪಡೆದಿರುತ್ತವೆ. ಅದರಜತೆಗೆ ಮನರಂಜನೆ, ಗೃಹೋಪಯೋಗಿ ವಸ್ತುಗಳಮಾರಾಟ ಸೇರಿದಂತೆ ಮೇಳ ಅಕ್ಷರಶಃ ಜಾತ್ರೆಯಂತೆನಡೆಯುತ್ತದೆ. ಕಳೆದ ಬಾರಿ ನಡೆದ ಮೇಳದಲ್ಲಿ ಬೀದಿಯಲ್ಲಿ ವ್ಯಾಪಾರ ನಡೆಸಿದ ವರ್ತಕರಿಂದ ಶುಲ್ಕ ಪಡೆಯಲಾಗಿತ್ತು. ಅದೇ ಹಣ 4-5 ಲಕ್ಷ ರೂ.ವರೆಗೆ ಸಂಗ್ರಹವಾಗಿತ್ತು ಎನ್ನುತ್ತವೆ ಮೂಲಗಳು.
ಕೋವಿಡ್-19 ಹಾಗೂ ಅತಿವೃಷ್ಟಿ ಕಾರಣಕ್ಕೆ ಈ ಬಾರಿ ಕೃಷಿ ಮೇಳ ಕೈ ಬಿಡಲಾಗಿದೆ. ಅತಿವೃಷ್ಟಿಯಿಂದ ರೈತರು ಸಾಕಷ್ಟು ಪಾಲ್ಗೊಳ್ಳುವುದು ಹೆಚ್ಚು. ಅಲ್ಲದೇ ಕೋವಿಡ್-ವೈರಸ್ ಕಾರಣಕ್ಕೆ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುವುದು ಕಷ್ಟ. ಹೀಗಾಗಿ ಆಚರಣೆ ಕೈ ಬಿಡಲಾಗಿದೆ.
-ಡಾ| ಕೆ.ಎನ್. ಕಟ್ಟಿಮನಿ, ಕುಲಪತಿ ಕೃಷಿ ವಿವಿ , ರಾಯಚೂರು