ರಾಯಬಾಗ: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಪಡೆಯಲು ಪರಿಶ್ರಮ, ವಿನಯಶೀಲತೆ, ಸಕಾರಾತ್ಮಕ ವಿಚಾರ, ಆತ್ಮವಿಶ್ವಾಸ ಹೊಂದಿ ಸತತ ಪ್ರಯತ್ನ ಮಾಡಬೇಕೆಂದು ಕೊಲ್ಲಾಪುರ ಜೈನ ಮಠದ ಲಕ್ಷ್ಮೀ ಸೇನ ಭಟ್ಟಾರಕ
ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
Advertisement
ರವಿವಾರ ಪಟ್ಟಣದ ಮಹಾವೀರ ಭವನದಲ್ಲಿ ಅರಿಹಂತ ಚಾರಿಟೇಬಲ್ ಫೌಂಡೇಶನ್ ದಶಮಾನೋತ್ಸವ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿದ್ದ ತಾಲೂಕಿನ ಜೈನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಂಸ್ಥೆ ತಾಲೂಕಿನ ಬಡ ಪ್ರತಿಭಾವಂತ ಜೈನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಪುರಸ್ಕಾರ ನೀಡುತ್ತಿದ್ದು ಇದರ ಸದುಪಯೋಗವನ್ನು ಪಡೆದ ವಿದ್ಯಾರ್ಥಿಗಳು ಸಮಾಜದ ಕೀರ್ತಿಯನ್ನು ಎತ್ತರಕ್ಕೆ ಬೆಳೆಸಬೇಕು. ತಮ್ಮ ಸೇವೆಯನ್ನು ದೇಶಕ್ಕೆ, ಸಮಾಜದ ಶ್ರೇಯೋಭಿವೃದ್ಧಿಗೆ ಮೀಸಲಿಡಬೇಕೆಂದರು.
ಧನಪಾಲ ಹಳಿಂಗಳಿ, ಮಹಾವೀರ ನಿಲಜಗಿ, ಸಮ್ಮೇದ ಪಾಟೀಲ, ವಿವೇಕ ಶೆಟ್ಟಿ, ಸೇರಿ ಅನೇಕರು ಇದ್ದರು. ಕಾರ್ಯದರ್ಶಿ ಮಲ್ಲಪ್ಪ ಖಾನಟ್ಟಿ ಸ್ವಾಗತಿಸಿದರು. ವೀರಶ್ರೀ ಸಮಾಜೆ ನಿರೂಪಿಸಿದರು, ವೀಣಾ ಹುಲಬತ್ತೆ ವಂದಿಸಿದರು.