Advertisement

ಸೀಮಿತ ಓವರ್‌ ತಂಡದಲ್ಲಿ ರಾಹುಲ್‌ಗೆ ಸ್ಥಾನ ಗಟ್ಟಿಯಾದ ಖುಷಿ

07:59 PM Dec 20, 2019 | Team Udayavani |

ಭಾರತ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆದಿರುವ ಕೆ.ಎಲ್‌.ರಾಹುಲ್‌ ಈಗ ನಿರಾಳವಾಗಿದ್ದಾರೆ. ಒಂದು ಕಾಲದಲ್ಲಿ ಮೂರೂ ಮಾದರಿಯ ತಂಡಗಳಲ್ಲಿ, ಭಾರತದ ಅವಿಭಾಜ್ಯ ಅಂಗವಾಗಿದ್ದ ಅವರು ಇದ್ದಕ್ಕಿದ್ದಂತೆ ಒಂದೊಂದೇ ತಂಡದಿಂದ ಹೊರಬೀಳಲು ಆರಂಭಿಸಿದರು. ಮೊದಲು ಸತತ ವೈಫ‌ಲ್ಯದ ಕಾರಣ ಟೆಸ್ಟ್‌ ತಂಡದಿಂದ ಹೊರಬಿದ್ದರು. ಮತ್ತೆ ಈ ಸ್ಥಾನ ಪಡೆಯುವುದು ಸಾಧ್ಯವಿಲ್ಲ ಎನ್ನುವಷ್ಟು ಪೈಪೋಟಿ ತಂಡದಲ್ಲಿದೆ.

Advertisement

ಇದರ ಮಧ್ಯೆ ಟಿ20-ಏಕದಿನದಿಂದಲೂ ಹೊರಬೀಳುವ ಆತಂಕದಲ್ಲಿದ್ದರು. ಏಕದಿನ ವಿಶ್ವಕಪ್‌ನಲ್ಲಿ ಅಮೋಘವಾಗಿ ಆಡಿದರೂ ಮುಂದೆ ಅವರು ಸ್ಥಾನ ಪಡೆಯಲು ಒದ್ದಾಡುವಂತಾಯಿತು. ಇದೇಕೆ ಹೀಗಾಯ್ತು ಎಂಬ ಚಿಂತೆಯಲ್ಲಿರುವಾಗಲೇ ದಿಢೀರನೆ ವೆಸ್ಟ್‌ ಇಂಡೀಸ್‌ ವಿರುದ್ಧ ಟಿ20 ಸರಣಿಯಲ್ಲಿ ಆರಂಭಿಕನಾಗಿ ಆಡಲಿಳಿದರು. ಇದಕ್ಕೆ ಅವಕಾಶ ನೀಡಿದ್ದು ಶಿಖರ್‌ ಧವನ್‌ಗೆ ಆದ ಗಾಯ. ಈ ಅವಕಾಶದಲ್ಲಿ ಅವರು ಮೊದಲ ಮತ್ತು ಮೂರನೇ ಟಿ20 ಪಂದ್ಯದಲ್ಲಿ ಸ್ಫೋಟಿಸಿದರು.

ಮೂರನೇ ಪಂದ್ಯದಲ್ಲೂ 90ರ ಗಡಿದಾಟಿ, ಸನಿಹದಲ್ಲಿ ಶತಕ ತಪ್ಪಿಸಿಕೊಂಡರು. ಇಲ್ಲಿಂದ ರಾಹುಲ್‌ ಆತ್ಮವಿಶ್ವಾಸ ಏರಿದೆ. ಅವರಿಗೆ ಈಗ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಆತಂಕವಿಲ್ಲ. ಆದರೆ ಈ ಲಯವನ್ನು ಅವರು ಉಳಿಸಿಕೊಳ್ಳಬೇಕು. ಒಂದು ವೇಳೆ ಈ ಹಿಂದಿನಂತೆ ಕೆಲವು ಪಂದ್ಯಗಳಲ್ಲಿ ಅತ್ಯುತ್ತಮವಾಗಿ, ಅಷ್ಟೇ ಪಂದ್ಯಗಳಲ್ಲಿ ಕಳಪೆಯಾಗಿ ಆಡುವುದಾದರೆ ಶಾಶ್ವತವಾಗಿ ಅವರು ಆತಂಕದಲ್ಲೇ ಇರಬೇಕಾಗುತ್ತದೆ.

ಸದ್ಯ ಸೀಮಿತ ಓವರ್‌ಗಳ ತಂಡದ ಆರಂಭಿಕ ಶಿಖರ್‌ ಧವನ್‌ ಕೂಡ ಹೀಗೆಯೇ ಇದ್ದಾರೆ. ಅವರೂ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸದ್ಯದ ಮಟ್ಟಿಗೆ ರಾಹುಲ್‌ಗೆ ಇನ್ನೊಂದು ಸಿಹಿಸುದ್ದಿ ಸಿಕ್ಕಿದೆ. ಮುಂದಿನ ಟಿ20 ವಿಶ್ವಕಪ್‌ ಹೊತ್ತಿಗೆ ಅವರು ತಂಡದ ವಿಕೆಟ್‌ ಕೀಪರ್‌ ಆಗಬಹುದು. ಆಗ ತಂಡದಲ್ಲಿ ಅವರ ಸ್ಥಾನ ಗಟ್ಟಿಯಾಗುತ್ತದೆ. ಇದರ ನೇರ ಪರಿಣಾಮ, ಹಾಲಿ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಸ್ಥಾನ ಕಳೆದುಕೊಳ್ಳುವು­ದರಲ್ಲಿ ಮುಕ್ತಾಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next