Advertisement

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

03:38 PM Nov 23, 2024 | Team Udayavani |

ಪರ್ತ್:‌ ಬಾರ್ಡರ್-ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸಂಪೂರ್ಣ ಹಿಡಿತ ಸಾಧಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡವು 218 ರನ್‌ ಮುನ್ನಡೆಯಲ್ಲಿದೆ.

Advertisement

ಮೊದಲ ದಿನದಾಟದ ಅಂತ್ಯಕ್ಕೆ ಏಳು ವಿಕೆಟ್‌ ನಷ್ಟಕ್ಕೆ 67 ರನ್‌ ಗಳಿಸಿದ್ದ ಆಸ್ಟ್ರೇಲಿಯಾ ತಂಡವು ಶನಿವಾರ ಮೊದಲ ಸೆಶನ್‌ ನಲ್ಲಿ 104 ರನ್‌ ಗಳಿಗೆ ಆಲೌಟಾಯಿತು. ಬಳಿಕ ಬ್ಯಾಟಿಂಗ್‌ ಆರಂಭಿಸಿದ ಭಾರತ ಯಾವುದೇ ವಿಕೆಟ್‌ ನಷ್ಟವಿಲ್ಲದೆ 172 ರನ್‌ ಗಳಿಸಿದೆ.

ಭಾರತದ ಪರ ಆರಂಭಿಕರಾಗಿ ಇಳಿದ ಯಶಸ್ವಿ ಜೈಸ್ವಾಲ್‌ ಮತ್ತು ಕೆಎಲ್‌ ರಾಹುಲ್‌ ಅವರು ಟೀಂ ಇಂಡಿಯಾಗೆ ಭದ್ರ ಬುನಾದಿ ಯಾಕಿದ್ದಾರೆ. ಎರಡು ಸೆಶನ್‌ ಗಳಲ್ಲಿ ಆಸೀಸ್‌ ಬೌಲರ್‌ ಗಳನ್ನು ಎದುರಿಸಿದ ಈ ಜೋಡಿ ಅಜೇಯ 172 ರನ್‌ ಕಲೆ ಹಾಕಿದೆ.

ಯಶಸ್ವಿ ಜೈಸ್ವಾಲ್‌ ಅವರು ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ ನೆರವಿನಿಂದ ಅಜೇಯ 90 ರನ್‌ ಗಳಿಸಿದ್ದು, ಕೆಎಲ್‌ ರಾಹುಲ್‌ ಅವರು ನಾಲ್ಕು ಬೌಂಡರಿ ನೆರವಿನಿಂದ 62 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಸದ್ಯ ಭಾರತ 218 ರನ್‌ ಮುನ್ನಡೆಯಲ್ಲಿದೆ.

Advertisement

2010 ರಲ್ಲಿ ಎಂಸಿಜಿ ನಲ್ಲಿ ಆಂಡ್ರ್ಯೂ ಸ್ಟ್ರಾಸ್ ಮತ್ತು ಅಲಸ್ಟೇರ್ ಕುಕ್ ಅವರು 159 ರನ್‌ ಗಳಿಸಿದ ಬಳಿಕ ಆಸ್ಟ್ರೇಲಿಯಾದಲ್ಲಿ ಪ್ರವಾಸಿ ತಂಡದ ಮೊದಲ 150+ ಆರಂಭಿಕ ಜೊತೆಯಾಟವನ್ನು ರಾಹುಲ್‌ ಜೈಸ್ವಾಲ್‌ ಆಡಿದರು.

ಮೊದಲ ದಿನದಾಟದಲ್ಲಿ ವೇಗಿಗಳಿಗೆ ನೆರವು ನೀಡಿದ್ದ ಪರ್ತ್‌ ಪಿಚ್‌ ಎರಡನೇ ದಿನದಾಟದಲ್ಲಿ ನಿಧಾನವಾಗಿ ಬ್ಯಾಟರ್‌ ಸ್ನೇಹಿಯಾಗಿ ಪರಿವರ್ತನೆಯಾಗಿದೆ. ಮೊದಲ ದಿನದಾಟದಲ್ಲಿ 217 ರನ್‌ ಗಳಿಗೆ 17 ವಿಕೆಟ್‌ ಗಳು ಉರುಳಿದ್ದವು. ಆದರೆ ಎರಡನೇ ದಿನದಾಟದಲ್ಲಿ 209 ರನ್‌ ಗಳಿಗೆ ಕೇವಲ ಮೂರು ವಿಕೆಟ್‌ ಉರುಳಿದೆ.

Advertisement

Udayavani is now on Telegram. Click here to join our channel and stay updated with the latest news.

Next