Advertisement

ಪ್ರಧಾನಿಯಾಗುವ ಮುನ್ನ ರಾಹುಲ್‌ ರಾಜ್ಯ ಚುನಾವಣೆ ಗೆಲ್ಲಲಿ: ಬಿಜೆಪಿ

05:32 PM May 08, 2018 | Team Udayavani |

ಹೊಸದಿಲ್ಲಿ : ದೇಶದ ಪ್ರಧಾನಿಯಾಗಲು ತಾನು ಸಿದ್ಧ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿರುವುದನ್ನು ಕಟುವಾಗಿ ಟೀಕಿಸಿರುವ ಬಿಜೆಪಿ, “ರಾಹುಲ್‌  ಅವರು ದೇಶದ ಪ್ರಧಾನಿಯಾಗುವ ಮೊದಲು ರಾಜ್ಯದ ವಿಧಾನಸಭಾ ಚುನಾವಣೆಗಳನ್ನು ಗೆದ್ದು ತೋರಿಸಬೇಕು; ಕೇವಲ ದೊಡ್ಡ ದೊಡ್ಡ ಕನಸುಗಳನ್ನು ಇಟ್ಟುಕೊಂಡರೆ ಸಾಲದು’ ಎಂದು ವ್ಯಂಗ್ಯವಾಡಿದೆ.

Advertisement

ಬಿಜೆಪಿ ವಕ್ತಾರ ಶಹನವಾಜ್‌ ಹುಸೇನ್‌ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, “ದೇಶಧ ಪ್ರಧಾನಿಯಾಗುವಂತಹ ದೊಡ್ಡ ದೊಡ್ಡ ಕನಸುಗಳನ್ನು ಕಾಣುವ ಹಕ್ಕು ರಾಹುಲ್‌ ಗಾಂಧಿ ಅವರಿಗಿದೆ. ಆದರೆ ಕಾಂಗ್ರೆಸ್‌ ಮೈತ್ರಿಕೂಟದವರೇ ರಾಹುಲ್‌ ಅವರ ನಾಯಕತ್ವವನ್ನು ಒಪ್ಪುತ್ತಿಲ್ಲ. ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಉಪಾಧ್ಯಕ್ಷರಾದ ಬಳಿಕ ಅವರ ಪಕ್ಷ  13 ರಾಜ್ಯಗಳಲ್ಲಿನ ಚುನಾವಣೆಗಳನ್ನು ಸೋತಿದೆ; ರಾಹುಲ್‌ ಅವರು ಪಕ್ಷದ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್‌ ಐದು ರಾಜ್ಯಗಳಲ್ಲಿ ಸೋತಿದೆ; ಈಗ ಕರ್ನಾಟಕವು ಆರನೇಯದ್ದಾಗಿದೆ’ ಎಂದು ಹೇಳಿದರು. 

“ಇದೆಂತಹ ವಿಪರ್ಯಾಸ ನೋಡಿ; ರಾಹುಲ್‌ ಗಾಂಧಿ ಅವರು ಪಕ್ಷದ ಉಪಾಧ್ಯಕ್ಷರಾದ ಬಳಿಕ ಮತ್ತು ಅಧ್ಯಕ್ಷರಾದ ಬಳಿಕ ನಿರಂತರವಾಗಿ 18 ರಾಜ್ಯಗಳಲ್ಲಿನ ಚುನಾವಣೆಗಳನ್ನು ಸೋತಿದೆ; ಆದರೂ ಅವರು ದೇಶದ ಪ್ರಧಾನಿಯಾಗುವ ಕನಸನ್ನು ಕಾಣುತ್ತಾರೆ. ಕಾಂಗ್ರೆಸ್‌ ಮಿತ್ರ ಪಕ್ಷಗಳು ಕೂಡ ರಾಹುಲ್‌ ಅವರ ನಾಯಕತ್ವವನ್ನು ಒಪ್ಪುತ್ತಿಲ್ಲ’ ಎಂದ ಹುಸೇನ್‌ ಹೇಳಿದರು. 

2019ರ ಮಹಾ ಚುನಾವಣೆಯಲ್ಲಿ ದೇಶದ ಜನರು ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಚುನಾಯಿಸಲಿದ್ದಾರೆ ಎಂದು ಹುಸೇನ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next