Advertisement

ಇಂಗ್ಲೆಂಡ್ ಲಯನ್ಸ್ ವಿರುದ್ಧ ರಾಹುಲ್ ಕಣಕ್ಕೆ

12:24 PM Jan 30, 2019 | Team Udayavani |

ಮುಂಬೈ: ಅಸಭ್ಯ ಹೇಳಿಕೆಯಿಂದ ಭಾರತೀಯ ತಂಡದಿಂದ ಹೊರಬಿದ್ದ ನಂತರ ಕನ್ನಡಿಗ ಕೆ.ಎಲ್.ರಾಹುಲ್ ರನ್ನು ಭಾರತ ಎ ತಂಡದಲ್ಲಿ ಆಡಿಸಲು ಬಿಸಿಸಿಐ ಮುಂದಾಗಿದೆ. ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯಲಿರುವ ನಾಲ್ಕು ದಿನದ ಪಂದ್ಯಕ್ಕೆ ರಾಹುಲ್ ಆಯ್ಕೆಯಾಗಿದ್ದಾರೆ. 

Advertisement

ಫೆಬ್ರವರಿ ಏಳರಿಂದ ಕೇರಳದ ವಯನಾಡ್ ನಲ್ಲಿ ನಡೆಯಲಿರುವ ಇಂಗ್ಲೆಂಡ್ ಲಯನ್ಸ್ ವಿರುದ್ದದ ಎರಡು ಪಂದ್ಯಗಳ ಸರಣಿಗೆ ತಂಡ ಆಯ್ಕೆ ಮಾಡಲಾಗಿದೆ. ಅಂಕಿತ್ ಬಾವ್ನೆ ತಂಡವನ್ನು ಮುನ್ನಡೆಸಲಿದ್ದು, ಪ್ರಿಯಾಂಕ್ ಪಾಂಚಾಲ್, ಅಭಿಮನ್ಯು ಈಶ್ವರನ್, ಶ್ರೀಕರ್ ಭರತ್, ರಿಕಿ ಭುಯಿ, ಸಿದ್ದೇಶ್ ಲಾಡ್,  ಬ್ಯಾಟಿಂಗ್ ವಿಭಾಗದಲ್ಲಿದ್ದಾರೆ. ಜಲಜ್ ಸಕ್ಸೆನಾ ಆಲ್ ರೌಂಡರ್ ಆಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ. 


ವರುಣ್ ಅರೋನ್, ಆವೇಶ್ ಖಾನ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಶಹಬಾಜ್ ನದೀಮ್, ಮಯಾಂಕ್ ಮಾರ್ಕಂಡೆ ಬೌಲಿಂಗ್ ನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next