ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ “ವಕ್ರ ದೃಷ್ಟಿಕೋನ’ವುಳ್ಳ ವ್ಯಕ್ತಿ. ಅವರು ಯಾವುದನ್ನೂ ನೇರವಾಗಿ ನೋಡುವುದಿಲ್ಲ. ಬಡವರು, ವಲಸೆ ಕಾರ್ಮಿಕರ ಖಾತೆಗಳಿಗೆ ನೇರವಾಗಿ ಹಣ ವರ್ಗಾಯಿಸುವ ರಾಹುಲ್ ಯೋಜನೆಯನ್ನು ದೇಶದ ಜನರೇ ತಿರಸ್ಕರಿಸಿದ್ದಾರೆ. ಹೀಗೆಂದು ಹೇಳಿರುವುದು ಕೇಂದ್ರ ಗೃಹ ಸಚಿವ ಅಮಿತ್ ಶಾ. ಸರ್ಕಾರವು ಕಾರ್ಮಿಕರ ಖಾತೆಗಳಿಗೆ 6 ತಿಂಗಳ ಕಾಲ 7,500 ರೂ.ಗಳನ್ನು ವರ್ಗಾಯಿಸಬೇಕು ಎಂಬ ರಾಹುಲ್ ಆಗ್ರಹ ಕುರಿತು ಶಾ ಸುದ್ದಿವಾಹಿನಿ ಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಲೋಕ ಸಭೆ ಚುನಾವಣೆಗೂ ಮುನ್ನವೇ ರಾಹುಲ್ ನ್ಯಾಯ್ ಹೆಸರಿನ ಈ ಯೋಜನೆಯ ಸುತ್ತಲೇ ಸುತ್ತುತ್ತಿದ್ದಾರೆ. ಜನರು ಅದನ್ನು ತಿರಸ್ಕರಿಸಿರುವುದು ರಾಹುಲ್‌ಗೆ ಗೊತ್ತಿಲ್ಲವೆಂದು ಕಾಣಿಸುತ್ತದೆ. ವರ್ಷ ಕಳೆದರೂ ಅವರು ಮಾತ್ರ ಆ ಯೋಜನೆ ಬಿಟ್ಟು ಆಚೆ ಬರುತ್ತಿಲ್ಲ ಎಂದೂ ಶಾ ವ್ಯಂಗ್ಯವಾಡಿದ್ದಾರೆ.
ಸ್ಪಷ್ಟ ಬಹುಮತ: 2021ರ ಪಶ್ಚಿಮ ಬಂಗಾಲ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನೂ ಶಾ ವ್ಯಕ್ತಪಡಿಸಿದ್ದಾರೆ. ಬಂಗಾಲದ ಜನತೆ ಪರಿವರ್ತನೆ ಬಯಸುತ್ತಿದ್ದಾರೆ. ಮೂರನೇ ಎರಡರಷ್ಟು ಬಹುಮತದಿಂದ ನಾವು ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ ಎಂದಿದ್ದಾರೆ.
8ರಂದು ರ್ಯಾಲಿ ಜೂ.8ರಂದು ವರ್ಚುವಲ್ ರ್ಯಾಲಿ ಮೂಲಕ ಪ.ಬಂಗಾಳದ ಜನತೆಯನ್ನು ಉದ್ದೇಶಿಸಿ ಅಮಿತ್ ಶಾ ಭಾಷಣ ಮಾಡಲಿ¨ªಾರೆ ಎಂದು ಬಿಜೆಪಿ ಹೇಳಿದೆ. ಸದ್ಯ ಸಾರ್ವಜನಿಕ ಸಭೆಗಳಿಗೆ ನಿಷೇಧವಿರುವ ಕಾರಣ, ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ಸಂಪರ್ಕಿಸಲಿದ್ದೇವೆ. 5 ದಿನಗಳ ಕಾಲ ಈ ರ್ಯಾಲಿ ನಡೆಯಲಿದೆ ಎಂದಿದೆ.