Advertisement
ಸೋಮವಾರ ಸಂಜೆ ಇಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿಯವರು ಮಧ್ಯಪ್ರವೇಶಿಸಿ ವಿವಾದ ಬಗೆಹರಿಸಬೇಕೆಂದು ಒತ್ತಾಯಿಸಿದ ಅವರು, ಮಹದಾಯಿ ವಿವಾದ ಇತ್ಯರ್ಥ ಪಡಿಸಲು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಪರಿಹಾರ ಕಂಡು ಹಿಡಿಯಲು ಸಲಹೆ ನೀಡಿದರು.
ಕೇಂದ್ರ ಸರ್ಕಾರ ಫ್ರಾನ್ಸ್ ಜೊತೆಗೆ ರಫೆಲ್ ಯುದ್ದ ವಿಮಾನ ಖರೀದಿ ಮಾಡಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದು ಅದಕ್ಕೆ ಎಷ್ಟು ದರ ನೀಡಿದ್ದಾರೆಂದು ರಾಷ್ಟ್ರದ ಜನತೆಗೆ ತಿಳಿಸಬೇಕು. ದೇಶದ ಜನತೆಗೆ ತಿಳಿಸದಂತ ಗೌಪ್ಯತೆ ಅದರಲ್ಲೇನಿದೆ ಎಂದು ಪ್ರಧಾನಿ ಹೇಳಬೇಕೆಂದು ರಾಹುಲ್ ಒತ್ತಾಯಿಸಿದರು. ದೇಶದ ರಕ್ಷಣಾ ಸಚಿವರನ್ನು ಈ ಬಗ್ಗೆ ಕೇಳಿದರೆ, ಶೀಘ್ರವೇ ರಫೆಲ್ ಖರೀದಿ ದರದ ಮಾಹಿತಿ ನೀಡುವುದಾಗಿ ಹೇಳಿದ್ದರು. ಈಗ ಫ್ರಾನ್ಸ್ ಮತ್ತು ಭಾರತ ಸರ್ಕಾರದ ನಡುವಿನ ಗೌಪ್ಯತೆ ಕಾಪಾಡಲು ಬಹಿರಂಗ ಪಡಿಸಲು ಆಗುವುದಿಲ್ಲ ಎಂದು ಹೇಳುತ್ತಾರೆ.