Advertisement
ಹತ್ತೂಂಬತ್ತು ವರ್ಷಗಳಿಂದ ಪಕ್ಷದ ಚುಕ್ಕಾಣಿ ಹಿಡಿದಿರುವ ಸೋನಿಯಾ ಗಾಂಧಿ 2004 ಮತ್ತು 2009ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ಅನಾರೋಗ್ಯ ಪೀಡಿತರಾಗಿರುವುದರಿಂದಲೂ ಕಾಂಗ್ರೆಸ್ ವಲಯದಲ್ಲಿ ರಾಹುಲ್ ಅಧ್ಯಕ್ಷರಾಗ ಬೇಕೆಂಬ ಬೇಡಿಕೆ ಹೆಚ್ಚಿತ್ತು. ಸೋನಿಯಾ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನೇತೃತ್ವ ವಹಿಸುವುದನ್ನು ಮುಂದುವರಿಸಲಿದ್ದಾರೆ.
‘ನನ್ನನ್ನು ಪ್ರಧಾನಿ ಮಾಡಿದ್ದರಿಂದ ಪ್ರಣವ್‌ಗೆ ಬೇಸರವಾಗಿದ್ದು ನಿಜ. ಆದರೆ, ಈ ವಿಚಾರದಲ್ಲಿ ನನ್ನ ಪಾತ್ರವೇನೂ ಇರಲಿಲ್ಲ ಹಾಗೂ ನಾನು ಅನಿ ವಾರ್ಯತೆಯಲ್ಲಿ ಸಿಲುಕಿದ್ದೆ ಎಂಬುದೂ ಅವರಿಗೆ ಗೊತ್ತಿತ್ತು. ಹಾಗಾಗಿ ನನ್ನನ್ನು ಪ್ರಧಾನಿ ಹುದ್ದೆಗೆ ಏರಿಸಿದರೂ ನಮ್ಮಿಬ್ಬರ ನಡುವಿನ ಆತ್ಮೀಯತೆಗೆ ಧಕ್ಕೆಯಾಗಲಿಲ್ಲ. ಈ ಪ್ರೀತಿ ಕೊನೆಯವರೆಗೂ ಇರುತ್ತದೆ’ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದರು. ಅವರು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ‘ದಿ ಕೊಯ ಲಿಷನ್ ಇಯರ್ಸ್: 1996-2012’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.