ನವದೆಹಲಿ: ತನ್ನ ವಿರುದ್ಧ ಹಾಕಲಾಗಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದು ಮಾಡಲು ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಾಂಬೆ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ.
2018ರಲ್ಲಿ ರಫೇಲ್ ಫೈಟರ್ ಜೆಟ್ ವಿಚಾರದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, “ಮೋದಿ ಕಳ್ಳರ ಕಮಾಂಡರ್’ ಎಂದು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹೇಳಿದ್ದರು. ಇದರ ವಿರುದ್ಧ ಬಿಜೆಪಿ ಕಾರ್ಯಕರ್ತರೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ವಿಚಾರವಾಗಿ ರಾಹುಲ್ ಅವರಿಗೆ 2019ರಲ್ಲಿ ಸಮನ್ಸ್ ಕೂಡ ಜಾರಿ ಮಾಡಲಾಗಿತ್ತು.
ಇದುವರೆಗೂ ವಿಚಾರಣೆಗೆ ಹಾಜರಾಗಿರದ ರಾಹುಲ್ ಇದೀಗ ಈ ಪ್ರಕರಣ ರದ್ದು ಮಾಡಲು ಕೋರಿ ಬಾಂಬೆ ಹೈ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಮೈಕ್ರೋಸಾಫ್ಟ್ ನಿಂದ ಸರ್ಫೇಸ್ ಗೋ 3 ಬಿಡುಗಡೆ