ನವದೆಹಲಿ: ಇತ್ತೀಚೆಗೆ ಲಂಡನ್‌ನಲ್ಲಿ ಭಾರತದ ಬಗ್ಗೆ ಭಾಷಣ ಮಾಡಿ ಭಾರೀ ಟೀಕೆಗೆ ಗುರಿಯಾಗಿದ್ದ ರಾಹುಲ್ ಗಾಂಧಿ ಮೇಲೆ ಬಿಜೆಪಿಯ ಕೋಪ ತಣ್ಣಗಾದಂತಿಲ್ಲ. ರಾಹುಲ್ ಗಾಂಧಿಯ ಹೇಳಿಕೆಗಳು ವಿವಾದದ ಕಿಡಿಯನ್ನು ಹೊತ್ತಿಸಿದ ಬಳಿಕ ಬಿಜೆಪಿ, ರಾಹುಲ್ ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿವೆ.
ಈ ನಡುವೆ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಅವರು ರಾಹುಲ್ ಅವರನ್ನು ಆಧುನಿಕ ಕಾಲದ ಮಿರ್ ಜಾಫರ್ ಎಂದು ಕರೆದಿದ್ದಾರೆ.
ʻರಾಹುಲ್ ಗಾಂಧಿ ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಲೇಬೇಕು. ಅವರು ಪ್ರತಿ ಬಾರಿಯೂ ಭಾರತದ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ರಾಹುಲ್ ಗಾಂಧಿ ಆಧುನಿಕ ಭಾರತದ ರಾಜಕೀಯದ ಮಿರ್ ಜಾಫರ್ ಎಂದು ಸಂಬೀತ್ ಪಾತ್ರ ವ್ಯಂಗ್ಯವಾಡಿದ್ಧಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಬೀತ್ ಪಾತ್ರ, ಭಾರತದ ವಿಚಾರದಲ್ಲಿ ಇತರೆ ದೇಶಗಳು ಮಧ್ಯಸ್ಥಿಕೆ ವಹಿಸಬೇಕು ಎಂಬ ರಾಹುಲ್ ಹೇಳಿಕೆ ವಿರುದ್ಧ ಕಿಡಿ ಕಾರಿದ್ದಾರೆ. ಇದು ಭಾರತದ ವಿರುದ್ಧ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಮಾಡುತ್ತಿರುವ ಪಿತೂರಿ ಎಂದು ಹೇಳಿದರು. ಅಲ್ಲದೇ, ರಾಹುಲ್ ಗಾಂಧಿ ಅವರು ಸದನದಲ್ಲಿ ಭಾಗವಹಿಸುವುದೇ ಕಡಿಮೆ. ಆದರೆ ಪ್ರತಿ ಬಾರಿ ಮಾಧ್ಯಮದವರ ಮುಂದೆ ಬಂದು ನನಗೆ ಮಾತನಾಡಲು ಯಾರೂ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಹೇಳುತ್ತಾರೆ. ಆದೆಲ್ಲಾ ಅವರ ತಪ್ಪುಗಳನ್ನು ಮರೆಮಾಚಲು ಮಾಡಿಕೊಂಡಿರುವ ನೆಪಗಳು ಎಂದು ಸಂಬೀತ್ ಪಾತ್ರ ಕಿಡಿ ಕಾರಿದ್ದಾರೆ.
ಇದನ್ನೂ ಓದಿ:
80,000 ಪೊಲೀಸರಿದ್ದರೂ ಅಮೃತಪಾಲ್ ಪರಾರಿಯಾಗಲು ಹೇಗೆ ಸಾಧ್ಯ? ಸರ್ಕಾರಕ್ಕೆ ಹೈಕೋರ್ಟ್ ತರಾಟೆ