Advertisement
ಉತ್ತರ ಪ್ರದೇಶಕ್ಕೆ ಮಂಗಳವಾರ ಕಾಲಿಟ್ಟಿರುವ ಭಾರತ್‌ಜೋಡೋ ಯಾತ್ರೆಯಲ್ಲಿ ಭಾಗಿಯಾಗಿ, ರಾಹುಲ್ ಗಾಂಧಿಯನ್ನು ಸ್ವಾಗತಿಸಿದ ಪ್ರಿಯಾಂಕಾ, ನನ್ನ ಅಣ್ಣನ ಬಗ್ಗೆ ನನಗೆ ಹೆಮ್ಮೆ ಇದೆ. ಸರಕಾರ ಆತನ ಇಮೇಜ್ ಹಾಳುಮಾಡಲು ಕೋಟ್ಯಂತರ ರೂ. ಗಳನ್ನು ಸುರಿಯುತ್ತಿದೆ. ಆತನ ಹಿಂದೆ ಏಜೆನ್ಸಿಗಳನ್ನು ಛೂ ಬಿಟ್ಟಿದೆ. ಆದರೆ ರಾಹುಲ್ ಯಾವುದಕ್ಕೂ ಹೆದರಿಲ್ಲ. ಆತ ಯೋಧನಂತೆ. ಅದಾನಿ, ಅಂಬಾನಿಯಂಥ ಶ್ರೀಮಂತರು ರಾಜಕಾರಣಿಗಳನ್ನು, ಮಾಧ್ಯಮಗಳನ್ನು ಖರೀದಿಸಿರಬಹುದು. ಆದರೆ ನನ್ನ ಅಣ್ಣನನ್ನು ಕೊಂಡುಕೊಳ್ಳಲಾಗಿಲ್ಲ . ಆತ ಸದಾ ಸತ್ಯದ ಮಾರ್ಗದಲ್ಲಿದ್ದಾನೆ ಎಂದಿದ್ದಾರೆ.
ಬಯಸುತ್ತಾರೆ,’ ಎಂದು ಬಿಜೆಪಿ ದೂರಿದೆ. ಭಾರತ-ಚೀನ ಗಡಿ ವಿಷಯವಾಗಿ ರಾಹುಲ್ ಗಾಂಧಿ ಅವರ ಇತ್ತೀಚಿನ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, “ದೇಶ ಸುತ್ತುವುದರಿಂದಷ್ಟೇ ಭಾರತ ಏನೆಂದು ಅರ್ಥವಾಗುವುದಿಲ್ಲ. ಭಾರತೀಯತೆ ಏನು ಎಂಬುದನ್ನು ಮೊದಲು ಅರಿಯಬೇಕಾಗುತ್ತದೆ. ನಾಲ್ಕು ತಲೆಮಾರುಗಳಿಂದ (ಗಾಂಧಿ ಕುಟುಂಬ) ಭಾರತದ ಆವಿಷ್ಕಾರ ನಡೆಯುತ್ತಿದೆ,’ ಎಂದು ಟೀಕಿಸಿದರು.