ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ 14ನೇ ದಿನದ ಪಾದಯಾತ್ರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಗಡಿದಾಟಿ, ಗಣಿನಾಡು ಬಳ್ಳಾರಿಯತ್ತ ಸಾಗಿತು.
ಬೆಳಗ್ಗೆ 7.15ಕ್ಕೆ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರದಿಂದ ಪ್ರಾರಂಭವಾದ ಪಾದಯಾತ್ರೆ ಇಲ್ಲಿಂದ 6 ಕಿ.ಮೀ ಅಂತರದಲ್ಲಿರುವ ಕಣಕುಪ್ಪೆ ಗ್ರಾಮವನ್ನು ದಾಟುವ ಮೂಲಕ ಬಳ್ಳಾರಿ ಜಿಲ್ಲೆ ಪ್ರವೇಶಿಸಿದೆ.
ಚಿತ್ರದುರ್ಗ – ಬಳ್ಳಾರಿ ನಡುವೆ ಆಂಧ್ರ ಪ್ರದೇಶದ ಎರಡು ಗ್ರಾಮಗಳಿದ್ದು, ಮಧ್ಯಾಹ್ನದ ಕ್ಯಾಂಪ್ ಆಂಧ್ರದ ಮಾದೆನಹಳ್ಳಿ ಮಾರಮ್ಮನ ದೇವಸ್ಥಾನದ ಬಳಿ ಜಮಾವಣೆಯಾಗಲಿದೆ.
ಇದನ್ನೂ ಓದಿ:ಭಾರೀ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಕಾರು: ಚಾಲಕ ಪ್ರಾಣಪಾಯದಿಂದ ಪಾರು
ಸಂಜೆ 4 ಗಂಟೆಗೆ ಇಲ್ಲಿಂದ ಹೊರಟು, ಆಂಧ್ರ ಪ್ರದೇಶದ ಓಬಳಾಪುರಂ ಸಮೀಪದ ಬಳ್ಳಾರಿ ವ್ಯಾಪ್ತಿಯ ಹುಲಕುಂದಿ ಮಠದ ಬಳಿ ವಾಸ್ತವ್ಯ ಹೂಡಲಿದ್ದಾರೆ.
ಬೆಳಗ್ಗೆ ಪ್ರಾರಂಭವಾದ ಪಾದಯಾತ್ರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಾಥ್ ನೀಡಿದರು.