Advertisement

ರಾಹುಲ್‌ ಗಾಂಧಿ, ಯೆಚೂರಿ ವಿರುದ್ಧ ಮಾನನಷ್ಟ ದಾವೆ

07:10 AM Sep 19, 2017 | Harsha Rao |

ಮುಂಬಯಿ /ಹೊಸದಿಲ್ಲಿ: ಗೌರಿ ಲಂಕೇಶ್‌ ಹತ್ಯೆಯಲ್ಲಿ ಆರ್‌ಎಸ್‌ಎಸ್‌ ಕೈವಾಡ ಇದೆ ಎಂದು ಆರೋಪಿಸಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. 

Advertisement

ಆರ್‌ಎಸ್‌ಎಸ್‌ ಕಾರ್ಯಕರ್ತ, ನ್ಯಾಯವಾದಿ ಧ್ರಿತುಮಾನ್‌ ಜೋಶಿ ಮುಂಬ ಯಿಯ ಸ್ಥಳೀಯ ಕೋರ್ಟ್‌ನಲ್ಲಿ ಮೊಕ ದ್ದಮೆ ಹೂಡಿದ್ದಾರೆ. ಪ್ರಕರಣದ ವಿಚಾರಣೆ ಅ. 22ರಂದು ನಡೆಯುವ ಸಾಧ್ಯತೆ ಇದೆ. 

ದೂರಿನಲ್ಲಿ ರಾಹುಲ್‌ ಮತ್ತು ಯೆಚೂರಿ ಸಂಘಟನೆ ವಿರುದ್ಧ ಮಾಡಿರುವ ಆರೋಪ ಗಳನ್ನು ಉಲ್ಲೇಖೀಸಿದ್ದಾರೆ. ಅವರಿಬ್ಬರ ಹೇಳಿಕೆಗಳು ಮಾನಹಾನಿಕರವಾಗಿವೆ. ಜತೆಗೆ ಅದು ಕ್ಷುಲ್ಲಕ ಹೇಳಿಕೆ ಎಂದು ಜೋಶಿ ಪ್ರತಿ ಪಾದಿಸಿದ್ದಾರೆ. ಸಂಘಟನೆಯ ವರ್ಚಸ್ಸಿಗೆ ಧಕ್ಕೆ ತರಬೇಕೆಂದೇ ಅವರು ಅಂಥ ಹೇಳಿಕೆ ನೀಡಿದ್ದಾರೆಂದು ದೂರಿದ್ದಾರೆ. ರಾಹುಲ್‌ ವಿರುದ್ಧ ಈಗಾಗಲೇ ಮಹಾರಾಷ್ಟ್ರದ ಭಿವಂಡಿ ಜಿಲ್ಲಾ ಕೋರ್ಟಲ್ಲಿ ಸಂಘಟನೆ ವಿರುದ್ಧ ಮಾಡಿದ ಬೇರೊಂದು ಆರೋಪಕ್ಕೆ ಸಂಬಂಧಿಸಿದ ವಿಚಾರಣೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next