Advertisement

Ram ಮಂದಿರ ಉದ್ಘಾಟನೆಗೆ ಹೋದ ಬಚ್ಚನ್‌ ಕುಟುಂಬದ ವಿರುದ್ಧ ರಾಹುಲ್‌ ಟೀಕೆ

12:03 AM Feb 19, 2024 | Team Udayavani |

ಪ್ರಯಾಗ್‌ರಾಜ್‌: ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌, ನಟಿ ಐಶ್ವರ್ಯಾ ರೈ ಭಾಗವಹಿಸಿದ್ದಕ್ಕೆ ಸಂಸದ ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉ.ಪ್ರ. ಪ್ರಯಾಗ್‌ರಾಜ್‌ನಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸುವ ವೇಳೆ ಬಚ್ಚನ್‌, ಐಶ್ವರ್ಯಾ ರೈ ಹೆಸರನ್ನೂ ಪ್ರಸ್ತಾವಿಸಿದರು.

Advertisement

“ಮಂದಿರ ಉದ್ಘಾಟನೆಯಲ್ಲ ದೇಶ ಮುನ್ನಡೆಸುವ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯ ಭಾಗಿಯಾಗಿತ್ತೇ? ಅವರ ಬದಲಾಗಿ ಪ್ರಧಾನಿ ಜತೆಗೆ ಅಮಿತಾಭ್‌ ಬಚ್ಚನ್‌, ಐಶ್ವರ್ಯಾ ರೈ ಭಾಗವಹಿಸಿದ್ದರು. ಅವರು ನೀವು ಯಾರೂ ದೇಶವನ್ನು ಮುನ್ನಡೆಸುವವರು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಡಲು ಮುಂದಾಗಿದ್ದಾರೆ’ ಎಂದರು.

ರಾಹುಲ್‌ ನ್ಯಾಯ ಯಾತ್ರೆಗೆ ಹೋಗಲ್ಲ: ಅಖೀಲೇಶ್‌
ಲಕ್ನೋ: ಕಾಂಗ್ರೆಸ್‌ ಮತ್ತು ಎಸ್‌ಪಿ ನಡುವಿನ ಮೈತ್ರಿಯೂ ಮುರಿಯುತ್ತಾ? ಹಾಗೊಂದು ವದಂತಿ ಹರಿದಾಡುತ್ತಿದೆ. ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ರಾಹುಲ್‌ ಗಾಂಧಿಯವರ “ಭಾರತ್‌ ಜೋಡೋ ನ್ಯಾಯ ಯಾತ್ರೆ’ಯಲ್ಲಿ ಭಾಗವಹಿಸಲು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್‌ ಯಾದವ್‌ ನಿರಾಕರಿಸಿ ದ್ದಾರೆ. ಇದರ ಜತೆಗೆ ಲೋಕಸಭೆ ಚುನಾವಣೆಗಾಗಿ 2 ಪಕ್ಷಗಳ ನಡುವೆ ಸ್ಥಾನ ಹೊಂದಾಣಿಕೆಯೂ ಅಂತಿಮಗೊಂಡಿಲ್ಲ. ಹಿಂದಿನ ಸಂದರ್ಭಗಳಲ್ಲಿ ಅಖೀಲೇಶ್‌ ಯಾದವ್‌ ರಾಹುಲ್‌ ಅವರ ಯಾತ್ರೆಗೆ ಆಹ್ವಾನ ನೀಡಿರಲಿಲ್ಲ ಎಂದು ತಕರಾರು ತೆಗೆದಿದ್ದರು.
ಪಶ್ಚಿಮ ಬಂಗಾಲ, ಬಿಹಾರ, ಪಂಜಾಬ್‌ನಲ್ಲಿ ಇಂಡಿಯಾ ಒಕ್ಕೂಟ ಪಕ್ಷಗಳ ನಡುವೆ ಸ್ಥಾನ ಹೊಂದಾಣಿಕೆ ಮುರಿದು ಬಿದ್ದಿದೆ. ಉತ್ತರ ಪ್ರದೇಶ, ದಿಲ್ಲಿ, ಮಹಾರಾಷ್ಟ್ರಗಳಲ್ಲಿ ಸ್ಥಾನ ಹೊಂದಾಣಿಕೆ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next