Advertisement

ಜೇಸನ್ ರಾಯ್ ಬದಲಿಗೆ ಹೊಸ ಆಟಗಾರನನ್ನು ಆಯ್ಕೆ ಮಾಡಿದ ಗುಜರಾತ್ ಟೈಟಾನ್ಸ್

05:11 PM Mar 08, 2022 | Team Udayavani |

ಮುಂಬೈ: ಇನ್ನು ಕೆಲವೇ ವಾರಗಳಲ್ಲಿ 2022ರ ಸಾಲಿನ ಐಪಿಎಲ್ ಕೂಟ ಆರಂಭವಾಗಲಿದೆ. ಈ ಬಾರಿ ಎರಡು ಹೊಸ ತಂಡಗಳೊಂದಿಗೆ ದೊಡ್ಡ ಮಟ್ಟದ ಕೂಟ ನಡೆಯಲಿದೆ.

Advertisement

ಮೆಗಾ ಹರಾಜಿನಲ್ಲಿ ಎರಡು ಕೋಟಿ ರೂ ಗೆ ಗುಜರಾತ್ ಟೈಟನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದ ಜೇಸನ್ ರಾಯ್ ನಂತರ ಕೂಟದಿಂದ ಹಿಂದೆ ಸರಿದಿದ್ದರು. ಬಯೋ ಬಬಲ್ ವಾಸದ ಕಾರಣದಿಂದ ರಾಯ್ ಕೂಟದಲ್ಲಿ ಆಡದಿರಲು ನಿರ್ಧರಿಸಿದ್ದರು,

ಇದೀಗ ಗುಜರಾತ್ ಟೈಟಾನ್ಸ್ ತಂಡವು ರಾಯ್ ಬದಲಿಗೆ ಅಫ್ಘಾನಿಸ್ಥಾನದ ರಹಮಾನುಲ್ಲಾ ಗುರ್ಬಾಜ್ ಅವರನ್ನು ಆಯ್ಕೆ ಮಾಡಿದೆ. ಗುರ್ಬಾಜ್‌ನ ಒಪ್ಪಂದದ ಪತ್ರಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ.

ಇದನ್ನೂ ಓದಿ:ಶೇನ್ ವಾರ್ನ್ ಜೀವಕ್ಕೆ ಕಂಟಕವಾಗಿದ್ದು ಆತನ ಅತಿಯಾದ ಡಯಟ್!

20 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ಗುರ್ಬಾಜ್ ಅಫ್ಘಾನಿಸ್ಥಾನದ ಪರ ಒಂಬತ್ತು ಏಕದಿನ ಮತ್ತು 20 ಟಿ20 ಪಂದ್ಯಗಳನ್ನು ಆಡಿದ್ದಾರೆ. ಮೆಗಾ ಹರಾಜಿನಲ್ಲಿ ಅವರು 50 ಲಕ್ಷ ರೂ ಮೂಲ ಬೆಲೆ ಹೊಂದಿದ್ದರು ಆದರೆ ಅವರನ್ನು ಖರೀದಿ ಮಾಡಲು ಯಾವುದೇ ತಂಡ ಮನಸು ಮಾಡಿರಲಿಲ್ಲ

Advertisement
Advertisement

Udayavani is now on Telegram. Click here to join our channel and stay updated with the latest news.

Next