Advertisement

Raghupati Bhat ಪದವೀಧರರ ಅಗತ್ಯವನ್ನು ಪ್ರಾಮಾಣಿಕವಾಗಿ ಪೂರೈಸುವೆ

11:01 PM May 20, 2024 | Team Udayavani |

ಚಿಕ್ಕಮಗಳೂರು/ಶಿವಮೊಗ್ಗ : ತಾನು ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಪದವೀಧರರು ತನ್ನನ್ನು ಬೆಂಬಲಿಸುವಂತೆ ಮಾಜಿ ಶಾಸಕ ರಘುಪತಿ ಭಟ್‌ ಮನವಿ ಮಾಡಿದರು.

Advertisement

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾನು ಈಗಾಗಲೇ 3 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ನನ್ನನ್ನು ಗೆಲ್ಲಿಸಿದರೆ ಪ್ರಜ್ಞಾವಂತ ಪದವೀಧರರ ಮೂಲಭೂತ ಅಗತ್ಯಗಳನ್ನು ಪ್ರಾಮಾಣಿಕವಾಗಿ ಪೂರೈಸಬಲ್ಲೆ ಎಂದು ಭರವಸೆ ನೀಡಿದರು.

ಈಶ್ವರಪ್ಪ ಬೆಂಬಲ
ಕೆ.ಎಸ್‌.ಈಶ್ವರಪ್ಪ ಅವರು ರಾಷ್ಟ್ರಭಕ್ತರ ಬಳಗದ ಮೂಲಕ ರಘುಪತಿ ಭಟ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಸೋಮವಾರ ತಮ್ಮ ನಿವಾಸದಲ್ಲಿ ಚುನಾವಣ ಕಚೇರಿಗೆ ಅಧಿಕೃತ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next