Advertisement

ರಫೇಲ್‌ ಖರೀದಿ ಬೆಲೆ ತಿಳಿಸಿ 5 ಕೋಟಿ ಗೆಲ್ಲಿ: ಕಾಂಗ್ರೆಸ್ ಫ್ಲೆಕ್ಸ್‌

05:31 PM Oct 16, 2018 | Team Udayavani |

ಪಟ್ನಾ :  ಆಳುವ ಎನ್‌ಡಿಎ ಸರಕಾರ ಫ್ರಾನ್ಸ್‌ ನಿಂದ ಖರೀದಿಸಿರುವ ರಫೇಲ್‌ ಫೈಟರ್‌ ಜೆಟ್‌ ವಿಮಾನಗಳ ಬೆಲೆ ಎಷ್ಟೆಂಬುದನ್ನು ನಿಖರವಾಗಿ ತಿಳಿಸಿ ಐದು ಕೋಟಿ ರೂ. ಇನಾಮು ಗೆಲ್ಲಿ ಎಂಬ ಫ್ಲೆಕ್ಸ್‌ ಗಳು ಬಿಹಾರದ ರಾಜಧಾನಿ ಪಟ್ನಾದಲ್ಲಿ ಕಂಡು ಬಂದಿರುವುದು ಜನರ ಕುತೂಹಲ ಕೆರಳಿಸಿದೆ. 

Advertisement

ನಗರದ ಆದ್ಯಂತ ಈ ಬಗೆಯ ಫ್ಲೆಕ್ಸ್‌ ಗಳನ್ನು ದಸರಾ ಪೂಜಾ ಧಮಾಕಾ ಎಂಬ ರೀತಿಯಲ್ಲಿ  ಕಾಂಗ್ರೆಸ್‌ ನಾಯಕರಾದ ಸಿದ್ಧಾರ್ಥ್ ಕ್ಷತ್ರಿಯ, ವೆಂಕಟೇಶ್‌ ಹಾಕಿಸಿರುವುದಾಗಿ ವರದಿಗಳು ತಿಳಿಸಿವೆ. ಆದರೆ ಈ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಬಿಹಾರದ ಕಾಂಗ್ರೆಸ್‌ ಅಧ್ಯಕ್ಷ ಮದನ್‌ ಮೋಹನ್‌ ಝಾ ಜಾಣತನದಿಂದ ಹೇಳಿದ್ದಾರೆ.

ಬಿಹಾರದ ಡಿಸಿಎಂ ಸುಶೀಲ್‌ ಕುಮಾರ್‌ ಮೋದಿ ಅವರು ಈ ಫ್ಲೆಕ್ಸ್‌ ಬಗ್ಗೆ ಕಿಡಿಕಾರಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ರಫೇಲ್‌ ಕುರಿತ ಸುಳ್ಳನ್ನು ನೂರು ಬಾರಿ ಹೇಳಿದರೂ ಜನ ನಂಬುವುದಿಲ್ಲ; ಆದುದರಿಂದ ರಾಹುಲ್‌ ಗೇ ಐದು ಕೋಟಿ ರೂ. ಇನಾಮು ನೀಡುವುದು ಒಳ್ಳೆಯದು ಎಂದು ಸುಶೀಲ್‌ ಮೋದಿ ಟೀಕಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next