Advertisement

ಅಗ್ರಸ್ಥಾನ ಕಾಯ್ದುಕೊಂಡ ನಡಾಲ್‌, ವೋಜ್ನಿಯಾಕಿ

06:55 AM Feb 06, 2018 | Team Udayavani |

ನವದೆಹಲಿ: ಸ್ಪೇನ್‌ನ ರಫಾಯೆಲ್‌ ನಡಾಲ್‌ ಮತ್ತು ಆಸ್ಟ್ರೇಲಿಯಾ ಓಪನ್‌ ಗ್ರ್ಯಾನ್‌ಸ್ಲಾಮ್‌ ವಿಜೇತೆ ಡೆನ್ಮಾರ್ಕ್‌ನ ಕ್ಯಾರೋಲಿನಾ ವೋಜ್ನಿಯಾಕಿ ವಿಶ್ವ ಟೆನಿಸ್‌ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

Advertisement

ಇತ್ತೀಚೆಗೆ ನಡೆದ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ನಡಾಲ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಹೊರಬಿದ್ದರೂ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಡಾಲ್‌ ಒಟ್ಟು 9,760 ಅಂಕವನ್ನು ಹೊಂದಿದ್ದಾರೆ. ಆಸ್ಟ್ರೇಲಿಯನ್‌ ಓಪನ್‌ ಮೂಲಕ ವೃತ್ತಿ ಜೀವನದಲ್ಲಿ 20ನೇ ಗ್ರ್ಯಾನ್‌ಸ್ಲಾಮ್‌ ಗೆದ್ದ ಸ್ವಿರ್ಜಲೆಂಡ್‌ನ‌ ರೋಜರ್‌ ಫೆಡರರ್‌ 9,605 ಅಂಕ ಸಂಪಾದಿಸಿ ವಿಶ್ವ ನಂ.2ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯನ್‌ ಓಪನ್‌ ಗೆಲ್ಲುವ ಮೂಲಕ 15 ಅಂಕವನ್ನು ಹೆಚ್ಚಿಗೆ ಪಡೆದಿದ್ದಾರೆ. ಉಳಿದಂತೆ ಆಸ್ಟ್ರೇಲಿಯನ್‌ ಓಪನ್‌ ರನ್ನರ್‌ ಅಪ್‌ ಮರಿನ್‌ ಸಿಲಿಕ್‌ ವಿಶ್ವ ನಂ.3ನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಸಿಲಿಕ್‌ 6ನೇ ಸ್ಥಾನದಲ್ಲಿದ್ದರು.

ಆಸ್ಟ್ರೇಲಿಯನ್‌ ಓಪನ್‌ ಮೂಲಕ ವೃತ್ತಿ ಜೀವನದಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್‌ ಗೆದ್ದ ವೋಜ್ನಿಯಾಕಿ 7,965 ಅಂಕ ಸಂಪಾದಿಸಿ ನಂ.1ನೇ ಸ್ಥಾನ ಕಾಯ್ದುಕೊಂಡಿದ್ದಾರೆ. 2012ರ ನಂತರ ವೋಜ್ನಿಯಾಕಿ ಕಳೆದವಾರ ನಂ.1 ಶ್ರೇಯಾಂಕಕ್ಕೇರಿದ್ದರು. ಉಳಿದಂತೆ ರೊಮೆನಿಯಾದ ಸಿಮೋನಾ ಹಾಲೆಪ್‌ 7,616 ಅಂಕ ಸಂಪಾದಿಸಿ 2ನೇ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next